ನೂತನ ಸಂಸತ್ ಭವನದಲ್ಲಿ ಭದ್ರತಾ ಲೋಪವಾಗಿದೆ. ಲೋಕಸಭಾ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ನುಗ್ಗಿರುವ ಘಟನೆ ನಡೆದಿದೆ. ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬ ವಿದ್ಯಾರ್ಥಿಗಳು ಸದನ ನಡೆಯುವ ಸಂದರ್ಭದಲ್ಲಿ ಏಕಾಏಕಿ ಒಳನುಗ್ಗಿದ್ದಾರೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಪಾಸ್ ಪಡೆದು ಸಂಸತ್ ಪ್ರವೇಶ ಪಡೆದುಕೊಂಡಿದ್ದ ಈ ಇಬ್ಬರು ಬೆಂಚುಗಳ ಮೇಲೆ ಹತ್ತಿ ಸ್ಪೀಕರ್‌ನತ್ತ ಸಾಗಲು ಯತ್ನಿಸಿದ್ದರು. ಇನ್ನು ಒಳ ನುಗ್ಗಿದ ಬಳಿಕ ಶೂನಲ್ಲಿ ಇರಿಸಿದ್ದ ಡಬ್ಬಿ ಹೊರತೆಗೆದು ಅದರಲ್ಲಿದ್ದ ಬಣ್ಣದ ಹೊಗೆಯನ್ನು ಸಿಡಿಸಿದ ಈ ಇಬ್ಬರು ನೆರೆದಿದ್ದ ಸಂಸದರು ಹೆದರಿ ಓಡುವಂತೆ ಮಾಡಿದ್ದರು.
ಇನ್ನು ಈ ಇಬ್ಬರ ಪೈಕಿ ಸಾಗರ್ ಶರ್ಮಾ ಎಂಬಾತ ಸಂಸದರ ಕೈಗೆ ಸಿಕ್ಕಿದ್ದು, ಆತನಿಗೆ ಸ್ಥಳದಲ್ಲೇ ಸಂಸದರು ಥಳಿಸಿದ್ದಾರೆ. ಸಾಗರ್ ಶರ್ಮಾ ತಲೆ ಕೂದಲನ್ನು ಹಿಡಿದು ಸದನದಲ್ಲಿಯೇ ಸಂಸದರು ಹೊಡೆಯುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇನ್ನು ಬಂಧಿತರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಿಸಲಾಗಿದ್ದು, ಮನೋರಂಜನ್‌ನ ಮೈಸೂರು ನಿವಾಸದಲ್ಲೂ ಸಹ ವಿಚಾರಣೆ ಆರಂಭವಾಗಿದೆ.