ಬೆಳಗಾವಿ : ರಾಜ್ಯದಲ್ಲಿ ಮತದಾನ ದಿನ ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿಗಳು ಪ್ರಚಾರದಲ್ಲಿ ತೊಡಗಿದ್ದಾರೆ.
ಈ ನಡುವೆ ಬುಧವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಈ ಸಂದರ್ಭ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.
ಈ ವೇಳೆ ಸಿದ್ದರಾಮಯ್ಯ, ಕುಷಲೋಪರಿಯ ಭಾಗವಾಗಿ ಸಿಎಂ ಬೊಮ್ಮಾಯಿಯ ಬೆನ್ನು ತಟ್ಟಿದ್ದಾರೆ. ಇದಾದ ಮೇಲೆ ಇಬ್ಬರೂ ಕೈ ಕುಲುಕಿ ಅಲ್ಲಿಂದ ತೆರಳಿದ್ದಾರೆ.