ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುವ ನಿರ್ಧರಿಸಿರುವ ಕಾಂಗ್ರೆಸ್ ಸರ್ಕಾರ ಒಂದು ವಚನಭ್ರಷ್ಟ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದ ಬಿಜೆಪಿ ಕಚೇರಿ ಮುಂದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಟೀಲ್, ಚುನಾವಣಾ ಸಮಯದಲ್ಲಿ ಪ್ರತಿ ಕುಟುಂಬದ ಸದಸ್ಯನಿಗೆ ತಲಾ 10 ಕೇಜಿಯಂತೆ ಅಕ್ಕಿ ನೀಡುವ ಗ್ಯಾರಂಟಿಯನ್ನು ಸಿದ್ದರಾಮಯ್ಯ ನೀಡಿದ್ದರು. ಅಂದರೆ, ಕೇಂದ್ರ ಸರ್ಕಾರ ನೀಡುವ 5 ಕೇಜಿ ಅಕ್ಕಿ ಸೇರಿ ಪ್ರತಿ ಸದಸ್ಯನಿಗೆ 15 ಕೇಜಿ ಅಕ್ಕಿ ಸಿಗಬೇಕಿತ್ತು. ಆದರೆ ಸರ್ಕಾರ 5 ಕೇಜಿಗಷ್ಟೇ ಹಣ ನೀಡುವುದಾಗಿ ಹೇಳಿದೆ.
ಸರ್ಕಾರ 15 ಕೆಜಿ ಅಕ್ಕಿ ಅಥವಾ 10 ಕೆಜಿ ಅಕ್ಕಿ ಕೊಳ್ಳಲು ತಗಲುವ ಮೊತ್ತದಷ್ಟು ಹಣ ನೀಡದಿದ್ದರೆ ವಿಧಾನ ಸೌಧ ಒಳಗೆ ಮತ್ತು ಹೊರಗಡೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.