Mysore
15
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಗಟ್ಟಿ ಮುಟ್ಟಾಗಿದ್ದೇನೆ ಎಂದು ಟ್ವೀಟ್​ ಮಾಡಿ ಅಭಿಮಾನಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

ವಿಜಯನಗರ : ಸಿದ್ದರಾಮಯ್ಯ ಇಂದು ಕೂಡ್ಲಿಗಿ, ಹರಪನಹಳ್ಳಿ, ಹಗರಿಬೊಮ್ಮನ ಹಳ್ಳಿ, ಹೊಸಪೇಟೆ ವಿಧಾನ ಸಭೆ ಕ್ಷೇತ್ರಗಳಲ್ಲಿ ಮತಯಾಚನೆಗೆ ತೆರಳಿದ್ದು ಈ ಸಂದರ್ಭ ಬಿಸಿಲಿನ ಝಳಕ್ಕೆ ಕುಸಿದು ಬಿದ್ದಿದ್ದರು. ಈ ಬಗ್ಗೆ ಆತಂಕಿತರಾದ ಅಭಿಮಾನಿಗಳಿಗೆ ಸಿದ್ದರಾಮಯ್ಯ ಟ್ವೀಟ್​ ಮೂಲಕ ಭಯಪಡುವ ಅಗತ್ಯ ಇಲ್ಲ ಎನ್ನುವುದನ್ನು ವಿವರಿಸಿದ್ದಾರೆ.

ಬೆಳಗ್ಗೆ ಕೂಡ್ಲಿಗಿ, ಮಧ್ಯಾನ್ಹ ಹರಪನಹಳ್ಳಿ, ಸಂಜೆ ನಾಲ್ಕು ಗಂಟೆಗೆ ಹಗರಿಬೊಮ್ಮನ ಹಳ್ಳಿ, ರಾತ್ರಿ 7 ಕ್ಕೆ ಹೊಸಪೇಟೆಯಲ್ಲಿ ಅದ್ದೂರಿ ಪ್ರಚಾರ ಸಿದ್ದರಾಮಯ್ಯ ನಡೆಸಲಿದ್ದರು. ಈ ಹಿನ್ನೆಲೆಯಲ್ಲಿ ಕೂಡ್ಲಿಗಿಗೆ ಸಿದ್ದರಾಮಯ್ಯ ಬಳ್ಳಾರಿ ರಸ್ತೆಯಲ್ಲಿರೋ ಹೆಲಿಪ್ಯಾಡ್​ನಲ್ಲಿ ಬಂದಿಳಿದ ಮಾಜಿ ಸಿದ್ದರಾಮಯ್ಯ ಬಂದಿಳಿದಿದ್ದರು. ಕೂಡ್ಲಿಗಿಯಲ್ಲಿ ಬಿಸಿಲಿನ ತಾಪಕ್ಕೆ ಕ್ಷಣಮಾತ್ರದಲ್ಲಿ ಸಿದ್ದರಾಮಯ್ಯ ಕುಸಿದು ಬಿದ್ದಿದ್ದಾರೆ. ಕೂಡ್ಲಿಗಿಯ ಹೆಲಿಪ್ಯಾಡ್ ಬಳಿ ಕಾರಿನ ಬಾಗಿಲಿನ ಬಳಿ ಏಕಾಏಕಿ ಸಿದ್ದರಾಮಯ್ಯ ಕುಸಿದು ಬೀಳುತ್ತಿದ್ದಂತೆಯೇ ಕೈ ಹಿಡಿದ ವೈದ್ಯ ಗ್ಲೂಕೋಸ್ , ನೀರು ಕುಡಿಸಿದ್ದಾರೆ.

ಇದೀಗ ಸಿದ್ದರಾಮಯ್ಯ ಈ ಘಟನೆ ಬಗ್ಗೆ ಟ್ವೀಟ್​ ಮಾಡಿದ್ದು “ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ. ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ. ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ” ಎಂದು ಬರೆದುಕೊಂಡಿದ್ದಾರೆ.

https://twitter.com/siddaramaiah/status/1652210201829801984?t=yGoknktQtFyESwYrfW9LzQ&s=08

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!