Mysore
14
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಕತಾರ್‌ನಲ್ಲಿ ರೂಪಾಯಿ ಬಳಸಿ ಶಾಪಿಂಗ್ : ಪ್ರಧಾನಿಗೆ ಮಿಕಾ ಸಿಂಗ್ ಸೆಲ್ಯೂಟ್‌

ಕತಾರ್‌ : ವಿಮಾನ ನಿಲ್ದಾಣದಲ್ಲಿ ಡಾಲರ್‌ನಂತೆ ರೂಪಾಯಿ ಬಳಸಿ ಶಾಪಿಂಗ್‌ ಮಾಡಲು ಭಾರತೀಯರಿಗೆ ಅನುವು ಮಾಡಿಕೊಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ‘ಬಿಗ್‌ ಸೆಲ್ಯೂಟ್‌‘ ಎಂದು ಹಾಡುಗಾರ ಮಿಕಾ ಸಿಂಗ್‌ ಟ್ವೀಟ್ ಮಾಡಿದ್ದಾರೆ.

ಮಿಕಾ ಸಿಂಗ್‌ ಕತಾರ್‌ನ ದೋಹಾ ವಿಮಾನ ನಿಲ್ದಾಣದಲ್ಲಿರುವ LouisVuitton ಮಳಿಗೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಹಲವು ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಭಾರತೀಯ ಕರೆನ್ಸಿ ರೂಪಾಯಲ್ಲಿಯೇ ಬಿಲ್‌ ಪಾವತಿಸಿದ್ದಾರೆ. ಕತಾರ್‌ನಂತಹ ಮುಂದುವರಿದ ದೇಶದಲ್ಲಿ ಭಾರತದ ಕರೆನ್ಸಿಗೆ ಅನುವು ಮಾಡಿರುವುದರ ಬಗ್ಗೆ ಟ್ವೀಟ್‌ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

‘ದೋಹಾ ವಿಮಾನ ನಿಲ್ದಾಣದಲ್ಲಿರುವ LouisVuitton ಸ್ಟೋರ್‌ನಲ್ಲಿ ಶಾಪಿಂಗ್ ಮಾಡುವಾಗ ಭಾರತೀಯ ಕರೆನ್ಸಿ ರೂಪಾಯಿಯನ್ನು ಬಳಸಲು ಅವಕಾಶ ಮಾಡಿಕೊಟ್ಟಿರುವುದು ಖುಷಿ ಕೊಟ್ಟಿದೆ .ನೀವು ಇಲ್ಲಿನ ಯಾವುದೇ ರೆಸ್ಟೋರೆಂಟ್‌ಗೆ ಹೋದರೂ ರೂಪಾಯಿ ಬಳಸಬಹುದಾಗಿದೆ. ನಿಜಕ್ಕೂ ಇದು ಅದ್ಭುತವಲ್ಲವೇ? ನಮ್ಮ ಹಣವನ್ನು ಡಾಲರ್‌ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿರುವುಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊಡ್ಡ ನಮಸ್ಕಾರ‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!