Mysore
30
clear sky

Social Media

ಶನಿವಾರ, 31 ಜನವರಿ 2026
Light
Dark

ಕಾಫಿ ತೋಟದಲ್ಲಿ ಶಿಕಾರಿ : ಜಿಂಕೆ ಮಾಂಸದ ಜೊತೆಗೆ ನಾಡ ಬಂದೂಕು ವಶ

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ವನ್ಯಜೀವಿಗಳಿಗೆ ಆಪತ್ತು ಎದುರಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಮಾಂಸಕ್ಕಾಗಿ ವನ್ಯಜೀವಿಗಳನ್ನ ಬೇಟೆ ಮಾಡುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ತಾಲೂಕಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮೇಲಿನ ಹುಲುವತ್ತಿ ಗ್ರಾಮದ ಸಂಗಮ ಕಾಫಿ ಎಸ್ಟೇಟ್ ಮೇಲೆ ಮತ್ತೋಡಿ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಮಂಗಳೂರು ಮೂಲದ 6 ಜನ‌ ಪ್ರವಾಸಿಗರು ಸೇರಿದಂತೆ ಎಸ್ಟೇಟ್ ಸಿಬ್ಬಂದಿ ಶಕೀಲ್ ನನ್ನ ಬಂಧಿಸಿ 8 ಕೆ.ಜೆ ಜಿಂಕೆ ಮಾಂಸ ,ಶಿಕಾರಿಗೆ ಬಳಸುತ್ತಿದ್ದ ಬಂದೂಕನನ್ನ ವಶ ಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆಯನ್ನ ಶಿಕಾರಿ ಮಾಡಿ ಪಾರ್ಟಿ ಮಾಡಲು ಎಸ್ಟೇಟ್ ನಲ್ಲಿ ಸಿದ್ದತೆ ನಡೆಸಲಾಗಿತ್ತು. ನಿರಂತರವಾಗಿ ಸಂರಕ್ಷಿತ ಪ್ರದೇಶಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ವನ್ಯಜೀವಿಗಳ ಬೇಟೆ ನಡೆಯುತ್ತಿದ್ದು ಹೊರ ರಾಜ್ಯ ಜಿಲ್ಲೆಗಳಿಂದ ಬಂದು ಮಾಂಸಕ್ಕಾಗಿ ವನ್ಯ ಜೀವಿಗಳನ್ನ ಬೇಟೆ ಮಾಡಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಹೋಂಸ್ಟೇ, ರೆಸ್ಟೋರೆಂಟ್ ಮಾಲೀಕರಿಗೆ ಕೆಲ ಪ್ರವಾಸಿಗರು ಕಾಡುಮಾಂಸಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಇದರಿಂದ ಅಕ್ರಮವಾಗಿ ಸಂರಕ್ಷಿತ ಅರಣ್ಯಗಳಲ್ಲಿ ಶಿಕಾರಿ ನಡೆಯುತ್ತಿದೆ.ಹೊರ ರಾಜ್ಯ,ಜಿಲ್ಲೆಗಳಿಂದ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರು ಹೋಂ ಸ್ಟೇ , ರೆಸ್ಟೋರೆಂಟ್ ಗಳಲ್ಲಿ ಬುಕಿಂಗ್ ಮಾಡುವ ಮುನ್ನ ಕಾಡುಮಾಂಸದ ಬೇಡಿಕೆ ಮಾಡುತ್ತಿದ್ದು. ಕಾಡುಮಾಂಸಕ್ಕೆ ಪ್ರವಾಸಿಗರಿಂದ ಡಿಮ್ಯಾಂಡ್ ಹೆಚ್ಚುತ್ತಿದ್ದಂತೆ ಹೋಂಸ್ಟೇ, ರೆಸ್ಟೋರೆಂಟ್ ನವರು ಪ್ರವಾಸಿಗರಿಗಾಗಿ ವನ್ಯಜೀವಿಗಳನ್ನ ಶಿಕಾರಿ ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕೆಲ ಹೋಂಸ್ಟೇ ರೆಸ್ಟೋರೆಂಟ್ ಗಳಲ್ಲಿ ಕಾಡು ಮಾಂಸದ ಊಟದ ಮೇನ್ಯೂ ಇದ್ದು. ಕೆಲ ಪ್ರವಾಸಿಗರು ಕಾಡು ಮಾಂಸದ ರುಚಿ ನೋಡಲು ಹೋಂಸ್ಟೇ ರೆಸ್ಟೋರೆಂಟ್ ರೂಮ್ ಬುಕಿಂಗ್ ಮಾಡುತ್ತಿದ್ದಾರೆ ,ಪ್ರವಾಸಿಗರಿಂದ. ಕಾಡುಮಾಂಸದ ಊಟಕ್ಕೆ ದುಪ್ಪಟ್ಟು ಹಣ ನಿಗದಿ ಮಾಡಿ ಪ್ರವಾಸಿಗರಿಗೆ ಊಟದ ಜೊತೆ ಕಾಡು ಪ್ರಾಣಿಗಳ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

ಹೊರ ರಾಜ್ಯ,ಜಿಲ್ಲೆಗಳ ಹೋಂಸ್ಟೇ ರೆಸ್ಟೋರೆಂಟ್ ಗೆ ಚಿಕ್ಕಮಗಳೂರಿನಿಂದ ಕಾಡು ಮಾಂಸವನ್ನು ಕಳಿಸಲಾಗುತ್ತಿದೆ ಎಂಬ ಅಂಶವು ಬೆಳಕಿಗೆ ಬಂದಿದ್ದು ಚಿಕ್ಕಮಗಳೂರು ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!