ಬೆಂಗಳೂರು : ದಸರಾ ಹಬ್ಬದ ಹಿನ್ನೆಲೆಯಲ್ಲಿ ಜನರು ಊರಿಗೆ ಪಯಣ ಬೆಳೆಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಟಿಕೆಟ್ ಬುಕ್ಕಿಂಗ್ ಟಿಕೆಟ್ ದರದಲ್ಲಿ ಗಣನೀಯ ಹೆಚ್ಚಳವಾಗಿದೆ.
ಪ್ರೀಮಿಯಂ ಬಸ್ ಸೇವೆಗಳ ಬೆಲೆಗಳು ಶೇಕಡಾ ೨೦ ರಷ್ಟು ಏರಿಕೆಯಾಗಿವೆ. ಬೆಂಗಳೂರಿನ ಮೆಜೆಸ್ಟಿಕ್, ಮೈಸೂರು ರಸ್ತೆ ಮತ್ತು ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿಯ ಬಸ್ ನಿಲ್ದಾಣಗಳು ಚಟುವಟಿಕೆಯಿಂದ ಗಿಜಿಗುಡುವಂತಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮ ಒಂದು ವಾರದವರೆಗೆ ಈ ಬಸ್ ನಿಲ್ದಾಣಗಳಿಂದ ರಾಜ್ಯದಾದ್ಯಂತ ಜನಪ್ರಿಯ ಸ್ಥಳಗಳಿಗೆ ೨,೦೦೦ ಕ್ಕೂ ಹೆಚ್ಚು ಬಸ್‌ಗಳನ್ನು ಓಡಿಸಲು ಪ್ರಾರಂಭಿಸಿದೆ.
ಅಕ್ಟೋಬರ್ ೨೪ ರಿಂದ೨೯ ರ ನಡುವೆ ಇತರ ನಗರಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಖಾಸಗಿ ಬಸ್ ನಿರ್ವಾಹಕರೂ ಹಿಂದೆ ಬಿದ್ದಿಲ್ಲ ಮತ್ತು ಬೆಳಗ್ಗೆಯಿಂದಲೇ ನೆರೆಯ ಚೆನ್ನೈ, ಕೇರಳ ಮತ್ತು ಹೈದರಾಬಾದ್‌ಗೆ ತೆರಳುವ ಬಹುತೇಕ ಖಾಸಗಿ ಬಸ್‌ಗಳ ಟಿಕೆಟ್‌ಗಳು ಮಾರಾಟವಾಗಿವೆ. ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರವನ್ನು ೫೦೦ ರಿಂದ ೧,೦೦೦ ರೂ.ಹೆಚ್ಚಿದೆ.
ಹಬ್ಬದ ಸಮಯದಲ್ಲಿ ಮಾತ್ರ ಸಾಧ್ಯವಿರುವ ಹೆಚ್ಚುವರಿ ಹಣ ಮಾಡಲು ಪ್ರತಿ ಹಬ್ಬಗಳಿಗೆ ಟಿಕೆಟ್ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಲಾಗುತ್ತದೆ, ಆದರೆ ಇದು ಜನರಿಗೆ ಹೊರೆಯಾಗುವ ಮಟ್ಟಿಗೆ ಏರಿಕೆಯಾಗದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. “ಎಂದು ಖಾಸಗಿ ಬಸ್ ನಿರ್ವಾಹಕರು ಹೇಳಿದ್ದಾರೆ.
ಖಾಸಗಿ ಬಸ್‌ನಲ್ಲಿ ಬೆಂಗಳೂರು ಮತ್ತು ಕೊಚ್ಚಿನ್ ನಡುವೆ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ೩,೫೦೦ ರೂ. ಹೈದರಾಬಾದ್ ಮತ್ತು ಬೆಂಗಳೂರಿಗೆ ೩,೦೦೦ ರೂ ಮತ್ತು ಮುಂಬೈ ಮತ್ತು ಬೆಂಗಳೂರು, ೩,೫೦೦ ರೂ.ದರ ನಿಗಧಿ ಮಾಡಲಾಗಿದೆ. ಹೆಚ್ಚಿನ ನಿರ್ವಾಹಕರು ಕೊಡಗು, ಚಿಕ್ಕಮಗಳೂರು, ಊಟಿ, ಮೈಸೂರು ಮತ್ತು ಪುದುಚೇರಿ ಪ್ರವಾಸಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಟೂರ್ ಏಜೆಂಟ್‌ಗಳು ಈ ಸ್ಥಳಗಳಿಗೆ ೩೦,೦೦೦ ಮತ್ತು ೫೦,೦೦೦ ರೂಪಾಯಿಗಳ ನಡುವೆ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿವೆ. ಪ್ಯಾಕೇಜ್‌ಗಳು ಸಾಮಾನ್ಯವಾಗಿ ಎರಡು ರಾತ್ರಿಗಳು ಮತ್ತು ಮೂರು ದಿನಗಳು” ಎಂದು ಟ್ರಾವೆಲ್ ಏಜೆಂಟರು ತಿಳಿಸಿದ್ದಾರೆ
ಬೆಳಗಿನ ಉಪಾಹಾರ, ದೃಶ್ಯವೀಕ್ಷಣೆಯ ಜೊತೆಗೆ ಜನಪ್ರಿಯ ಶಾಪಿಂಗ್ ಸ್ಥಳಗಳಲ್ಲಿ ನಿಲುಗಡೆ ಒಳಗೊಂಡಿರುತ್ತದೆ. ವಿನಂತಿಯ ಮೇರೆಗೆ ಚಾಲಕನೊಂದಿಗೆ ಕಾರನ್ನು ಸಹ ಒದಗಿಸಲಾಗುತ್ತದೆ, ಆದರೆ ಶುಲ್ಕಗಳು ಹೆಚ್ಚುವರಿ ಆಗುತ್ತವೆ” ಎಂದು ಹೇಳಿದ್ದಾರೆ.





