Mysore
15
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಹಿರಿಯ ರಂಗಕರ್ಮಿ ನ.ರತ್ನ ಇನ್ನಿಲ್ಲ

ಮೈಸೂರು: ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದ ನ.ರತ್ನ ಇಂದು ( ಜೂನ್‌ 19 ) ಬೆಳಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

89 ವರ್ಷ ವಯಸ್ಸಾಗಿದ್ದ ನ.ರತ್ನ ಅವರಿಗೆ ಪುತ್ರ ಅಜಿತ್,‌ ಪುತ್ರಿ ಕವಿತಾರತ್ನ ಇಬ್ಬರು ಮಕ್ಕಳಿದ್ದಾರೆ. ಅವರು ರಚಿಸಿದ ‘ಶಾಂತಿ ಕುಟೀರ’ ನಾಟಕ ಈಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದರು. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಇಂದು ನಡೆಯಲಿದೆ.

Tags:
error: Content is protected !!