Mysore
20
broken clouds

Social Media

ಶುಕ್ರವಾರ, 30 ಜನವರಿ 2026
Light
Dark

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಕೇರಳ ಹೈಕೋರ್ಟ್ : ಪೊಲೀಸ್ ಎಸ್ಐಟಿ ತಂಡ ರಚನೆ

ಮಲಪ್ಪುರಂ : ಕೇರಳ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಇಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಕೇರಳ ಪೊಲೀಸರು ಕೂಡ ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ದಳ (ಎಸ್ ಐಟಿ) ರಚನೆ ಮಾಡಿದ್ದಾರೆ.

22 ಮಂದಿಯ ಸಾವಿಗೆ ಕಾರಣವಾದ ಕೇರಳದ ಮಲಪ್ಪುರಂನ ತನೂರ್ ದೋಣಿ ದುರಂತದ ಕುರಿತು ಕೇರಳ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ಅನ್ನು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. “ಅಧಿಕಾರಿಗಳು ಎಲ್ಲಿದ್ದಾರೆ? ಅವರು ಏನು ಮಾಡುತ್ತಿದ್ದರು ಎಂದು ದೋಣಿ ಅಪಘಾತದ ಬಗ್ಗೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ದ ಚಾಟಿ ಬೀಸಿದೆ.

ಅಪಘಾತವು ಆಘಾತಕಾರಿ ಮತ್ತು ಕಾಡುವ ಸಂಗತಿಯಾಗಿದೆ ಮತ್ತು ದುರಂತವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಭಾನುವಾರ ರಾತ್ರಿ 7.30ರ ಸುಮಾರಿಗೆ ತನೂರಿನ ತೂವಲ್ತೀರಂ ಕಡಲತೀರದ ಸಮೀಪವಿರುವ ಅಳಿವೆ ಬಳಿ ದೋಣಿ ಮಗುಚಿ ಬಿದ್ದಿದ್ದು, ಜಿಲ್ಲೆಯ ಅಧಿಕಾರಿಗಳ ದುರಂತದಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಎಂಟು ತಿಂಗಳ ಮಗು ಸೇರಿ 17 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಕರು ಸೇರಿದಂತೆ ದೋಣಿಯಲ್ಲಿ 37 ಮಂದಿ ಇದ್ದರು ಎಂದು ಹೇಳಲಾಗಿದೆ.

ತನಿಖೆಗೆ ಎಸ್‌ಐಟಿ ರಚನೆ : ಇನ್ನು ಭಾನುವಾರ ಸಂಜೆ ಮಲಪ್ಪುರಂ ಜಿಲ್ಲೆಯ ತಾನೂರ್ ಪ್ರದೇಶದಲ್ಲಿ 22 ಜನರನ್ನು ಬಲಿತೆಗೆದುಕೊಂಡ ದುರಂತ ದೋಣಿ ದುರಂತದ ತನಿಖೆಗಾಗಿ ಕೇರಳ ಪೊಲೀಸರು ಮಂಗಳವಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರು ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುಜಿತ್ ದಾಸ್ ಎಸ್ ಅವರನ್ನು ತಂಡದ ಮುಖ್ಯಸ್ಥರಾಗಿ ವಹಿಸಿ ಆದೇಶ ಹೊರಡಿಸಿದ್ದಾರೆ.

ತನೂರ್ ಡಿವೈಎಸ್ಪಿ ವಿ ವಿ ಬೆನ್ನಿ, ತಾನೂರು ಠಾಣಾಧಿಕಾರಿ ಜೀವನ್ ಜಾರ್ಜ್ ಮತ್ತು ಕೊಂಡೊಟ್ಟಿ ಎಎಸ್ ಪಿ ವಿಜಯ ಭರತ್ ರೆಡ್ಡಿ ವಿಶೇಷ ತನಿಖಾ ತಂಡದ ಇತರ ಸದಸ್ಯರಾಗಿದ್ದಾರೆ. ಉತ್ತರ ವಲಯದ ಐಜಿ ನೀರಜ್ ಕುಮಾರ್ ಗುಪ್ತಾ ಅವರ ನೇರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿದೆ ಎಂದು ಅದು ಹೇಳಿದೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಡಿಜಿಪಿ ಸೂಚಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!