Mysore
16
clear sky

Social Media

ಗುರುವಾರ, 29 ಜನವರಿ 2026
Light
Dark

ಕೇರಳದಲ್ಲಿ ಕೋವಿಡ್‌ಗೆ ಎರಡನೇ ಬಲಿ

ಕೇರಳ : ದೇಶಾದ್ಯಂತ ಮತ್ತೆ ಕೊರೊನಾದ ಆತಂಕ ಸೃಷ್ಟಿಯಾಗಿದ್ದು, ಕೇರಳದಲ್ಲಿ ಕಳೆಡೆರೆಡು ದಿನಗಳಲ್ಲಿ ೨ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಸೂಚನೆ ನೀಡಲಾಗಿದೆ.

ನಿನ್ನೆ ಕೊರೊನಾ ಹೊಸತಳಿ ಜೆಎನ್‌೧ಗೆ 80 ವರ್ಷ ವೃದ್ಧ ಸಾವನ್ನಪ್ಪಿದ್ದರು. ಇಂದು ಮತ್ತೊಂದು ಸಾವಾಗಿದ್ದು, ಕಳೆದ ೧೦ ದಿನದಲ್ಲಿ ಮೂರು ಸಾವು ಸಂಭವಿಸಿದೆ.

ಇಲ್ಲಿನ 68 ವರ್ಷದ ಅಬ್ದುಲ್ ಅಜೀಜ್ ಎಂಬ ವೃದ್ಧರೊಬ್ಬರು ಮಾರಕ ವೈರಾಣುವಿಗೆ ಬಲಿಯಾಗಿದ್ದಾರೆ. ಅಧಿಕ ರಕ್ತದೊತ್ತಡದಿಂದ ಬಳಳುತ್ತಿದ್ದ ಅಬ್ದುಲ್ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕೇರಳದಲ್ಲಿ ಕೊರೊನಾ ವೈರಸ್‌ಗೆ ಇಬ್ಬರು ಬಲಿಯಾದಂತಾಗಿದೆ.

ಒಮಿಕ್ರಾನ್‌ ಹೊಸ ತಳಿ ಬಿಎ.2.86 ರೂಪಾಂತರ ತಳಿ ಜೆಎನ್‌1 ಆಗಿದೆ. ಸಾಂಕ್ರಾಮಿಕ ಕಾಯಿಲೆಗಳ ನಡವೆ ಮತ್ತೆ ಕೋವಿಡ್‌ ಭೀತಿ ಹೆಚ್ಚಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ಯಾವೆಲ್ಲಾ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!