Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸ್ಕೂಟರ್​ ಹಾಗೂ ಬಿಎಂಟಿಸಿ ಬಸ್ ಅಪಘಾತ : ಯುವಕ ಸಾವು

ಬೆಂಗಳೂರು : ಬಿಎಂಟಿಸಿ ಬಸ್​ನಡಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಯಲಹಂಕದ ಡಿ ಮಾರ್ಟ್ ಬಳಿ ನಡೆದಿದೆ. 24 ವರ್ಷದ ಭರತ ರೆಡ್ಡಿ ಬಿ ಎಂಬಾತ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಭರತ್​ ರೆಡ್ಡಿ ತನ್ನ ಸುಜಕಿ ಆಕ್ಸಿಸ್ ಸ್ಕೂಟರ್​​​ನಲ್ಲಿ ಹೋಗುತ್ತಿದ್ದಾಗ ಹಿಂಭಾಗದಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಹೊಡೆದ ಪರಿಣಾಮ ಭರತ್​ ರಸ್ತೆಯಲ್ಲಿ ಅಸುನೀಗಿದ್ದಾನೆ. ಅತಿವೇಗ ಹಾಗೂ ಅಜಾಗರುಕತೆಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಚಾರಿ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ