Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ರಷ್ಯಾದ ಲೂನಾ-25 ಲ್ಯಾಂಡರ್ ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ವಿಫಲ

ಮಾಸ್ಕೋ : ಭಾರತದ ಚಂದ್ರಯಾನ-3 ಗಿಂತ ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್ ಆಗಬೇಕಿದ್ದ ಕನಸು ಭಗ್ನಕೊಂಡಿದೆ. ಲೂನಾ-25 ಲ್ಯಾಂಡರ್ ಚಂದ್ರನ ಮೇಲೆ ಪೂರ್ವ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸಲು ವಿಫಲವಾಗಿದೆ. ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಂದ್ರನ ತನ್ನ ನಿಗದಿತ ಪೂರ್ವ-ಲ್ಯಾಂಡಿಂಗ್ ಕಕ್ಷೆಯನ್ನ ಪ್ರವೇಶಿಸುವಲ್ಲಿ ವಿಫಲವಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಲೂನಾ-25 ಶನಿವಾರ ಕಕ್ಷೆ ಪ್ರವೇಶಿಸಬೇಕಿತ್ತು. ಆದರೆ ತುರ್ತು ಪರಿಸ್ಥಿತಿಗಳಿಂದಾಗಿ ಪೂರ್ವ ಲ್ಯಾಂಡಿಂಗ್ ಕಕ್ಷೆ ವಿಫಲವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ನಿಗಮ ರೋಸ್ಕೋಸ್ಮಾಸ್ ತಿಳಿಸಿದೆ. ಈ ಬಗ್ಗೆ ರಷ್ಯಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ತಂಡ ಪರಿಶೀಲನೆ ಮಾಡುತ್ತಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಿದೆ ಎಂದು ಹೇಳಿದೆ.

ಆಗಸ್ಟ್ 10 ರಂದು ರಷ್ಯಾ ಲೂನಾ-25 ಗಗನ ನೌಕೆಯನ್ನು ಉಡಾವಣೆ ಮಾಡುವ ಮೂಲಕ ನಾಸಾ ಹಾಗೂ ಇತರ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿದಿತ್ತು. ಆಗಸ್ಟ್ 21 ರಂದು ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಯಲು ನಿರ್ಧರಿಸಲಾಗಿತ್ತು. ಆದರೆ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ಲೂನಾ-25 ವಿಫಲವಾಗಿದೆ ಎಂದು ಹೇಳಲಾಗಿದೆ. ಸದ್ಯ ಯೋಜನೆ ನಿಂತಿದೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಇನ್ನೂ ಚಂದ್ರಯಾನ-3 ಕಾರ್ಯಾಚರಣೆಯ ಕೊನೆ ಹಂತದ ಭಾಗವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಬೇರ್ಪಡಿಸುವ ಕಾರ್ಯ ಗುರುವಾರ ಯಶಸ್ವಿಯಾಗಿ ನಡೆದಿತ್ತು. ಈ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಗೊಳಿಸಿದೆ. ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ