Mysore
34
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣ : ಶೆಡ್‌ ಮಾಲೀಕ ಜಯಣ್ಣ ಹೇಳಿದ್ದೇನು ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಶೆಡ್‌ನ ಒಳಗೆ ನಡೆದದ್ದು ಎಲ್ಲವೂ ರೆಕಾರ್ಡ್‌ ಆಗಿರುತ್ತದೆ ಎಂದು ಶೆಡ್‌ ಮಾಲೀಕರಾದ ಜಯಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಅವರನ್ನು ಕೋಡಿಹಾಕಿದ್ದ ಶೆಡ್‌ ಸುತ್ತ ಚಿಚಿ ಕ್ಯಾಮೆರಾ ಇದೆ ಎಲ್ಲವೂ ರೆಕಾರ್ಡ್‌ ಆಗಿರುತ್ತದೆ ಎಂದು ಹೇಳಿದ್ದಾರೆ.

ಕಳೆದ 25 ವರ್ಷದಿಂದ ಕಿಶೋರ್‌ ಎಂಬುವವರಿಗೆ ನನ್ನ ಜಾಗವನ್ನು ಬಾಡಿಗೆಗೆ ನೀಡಿದ್ದೇನೆ. ಲೋನ್‌ ಕೇಸ್‌ನಲ್ಲಿ ಸೀಸ್‌ ಮಾಡಿದ ವಾಹನಗಳನ್ನು ಶೆಡ್‌ನಲ್ಲಿ ನಿಲ್ಲಿಸುತ್ತಿದ್ದರು. ಶೆಡ್‌ ಒಳಗೆ ಯಾವುದೇ ವಾಹನ ಹೋದರು ರೆಕಾರ್ಡ್‌ ಆಗಿರುತ್ತದೆ. ಯಾವುದೇ ವಾಹನ ಶೆಡ್‌ನಿಂದ ಹೊರ ಬಂದರೂ ರೆಕಾರ್ಡ್‌ ಆಗಿರುತ್ತದೆ ಎಂದರು.

5ರಿಂದ 6 ಎಕ್ಕರೆ ಪ್ರಾಪರ್ಟಿ ಬ್ಯಾಂಕ್‌ನವರದ್ದಾಗಿರುವ ಕಾರಣ ಎಲ್ಲಾ ರೀತಿಯ ಸೇಫ್ಟ್‌ಯನ್ನು ಮಾಡಲಾಗಿದೆ. ಹೀಗಾಗಿ ಏನನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಯಾವುದೇ ವಿಚಾರವನ್ನು ಮುಚ್ಚಿಡಲು ಸಾಧ್ಯವಿಲ್ಲ. ದರ್ಶನ್‌ ಬಂದಿರುವುದಾಗಲಿ, ಹೋಗಿರುವುದಾಗಲಿ, ಅಥವ ರೇಣುಕಾಸ್ವಾಮಿಯನ್ನು ಕರೆತಂದಿರುವುದು, ಹೊಡೆದಿರುವುದು ಎಲ್ಲವೂ ರೆಕಾರ್ಡ್‌ ಆಗಿರುತ್ತದೆ ಎಂದರು.

ಇಲ್ಲಿವರೆಗೆ ಯಾವ ಪೊಲೀಸರು ನನ್ನನ್ನು ಸಂಪರ್ಕ ಮಾಡಿಲ್ಲ. ಒಂದು ವೇಳೆ ಮಾಡಿದರೆ ನನ್ನನ್ನು ಕರೆದರೆ ವಿಚಾರಣೆಗೆ ಹೋಗುತ್ತೇನೆ ಎಂದು ಹೇಳಿದರು.

Tags:
error: Content is protected !!