Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನೆಹರೂ ಮ್ಯೂಸಿಯಂಗೆ ಮರುನಾಮಕರಣ: ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ನವದೆಹಲಿ : ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯವನ್ನು (ಎನ್ಎಂಎಂಎಲ್) ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಹಾಗೂ ಸೊಸೈಟಿ ಎಂದು ಮರುನಾಮಕರಣ ಮಾಡಲು ಕೇಂದ್ರವು ಇತ್ತೀಚೆಗೆ ನಿರ್ಧರಿಸಿದೆ. ಇದರ ಬೆನ್ನಲ್ಲೇ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯ ಎಂದು ಮರುನಾಮಕರಣ ಮಾಡುವ ಕೇಂದ್ರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಹಿರಿಯ ನಾಯಕ ಹಾಗೂ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಟ್ವೀಟ್ ಮಾಡಿ, “ಕ್ಷುಲ್ಲಕತೆ ಮತ್ತು ಸೇಡಿನ ಮತ್ತೊಂದು ಹೆಸರು ಮೋದಿ. 59 ವರ್ಷಗಳಿಂದ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (ಎನ್ಎಂಎಂಎಲ್) ಜಾಗತಿಕ ಬೌದ್ಧಿಕ ಹೆಗ್ಗುರುತು ಮತ್ತು ಪುಸ್ತಕಗಳು ಮತ್ತು ದಾಖಲೆಗಳ ನಿಧಿಯಾಗಿದೆ. ಇನ್ನು ಮುಂದೆ ಪ್ರಧಾನ ಮಂತ್ರಿಗಳ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಕರೆಯಲಾಗುವುದು, ಭಾರತೀಯ ರಾಷ್ಟ್ರ-ರಾಜ್ಯದ ಶಿಲ್ಪಕಾರರ ಹೆಸರು ಮತ್ತು ಪರಂಪರೆಯನ್ನು ವಿರೂಪಗೊಳಿಸಲು, ಅವಹೇಳನ ಮಾಡಲು ಮತ್ತು ನಾಶಮಾಡಲು ಮೋದಿ ಏನೆಲ್ಲಾ ಮಾಡುವುದಿಲ್ಲ ಹೇಳಿ. ತನ್ನ ಅಭದ್ರತೆಯಿಂದ ತುಂಬಿರುವ ಸಣ್ಣ,ಮನುಷ್ಯ ಸ್ವಯಂ -ಘೋಷಿತ ವಿಶ್ವಗುರು’’ ಎಂದು ಟ್ವಿಟಿಸಿದ್ದಾರೆ.congress

ಎಎನ್ಐ ಜೊತೆ ಮಾತನಾಡಿದ ಕಾರ್ಯಕಾರಿ ಮಂಡಳಿ, ಎನ್ಎಂಎಂಎಲ್ಎ ಉಪಾಧ್ಯಕ್ಷ ಸೂರ್ಯ ಪ್ರಕಾಶ್, “ಈ ಸೊಸೈಟಿಯ ಸಾಮಾನ್ಯ ಸಭೆಯ ನಿರ್ಣಯವನ್ನು ಅಂಗೀಕರಿಸುವುದು ಸಣ್ಣ ಹೆಜ್ಜೆಯಲ್ಲ. ಇದು ಪ್ರಜಾಪ್ರಭುತ್ವ ಮತ್ತು ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಅತ್ಯಂತ ದೊಡ್ಡ ಹೆಜ್ಜೆಯಾಗಿದೆ ಎಂದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ