Mysore
27
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಮಿಝೋರಾಂ ಮೇಲೆ ರಾಜೇಶ್ ಪೈಲಟ್ ಬಾಂಬ್ ಎಸೆದಿದ್ದರು: ಮಾಳವೀಯ ಫೋಸ್ಟ್ ಗೆ ಸಚಿನ್ ಪೈಲಟ್ ತಿರುಗೇಟು

ನವದೆಹಲಿ : ಮಿಝೋರಾಂನಲ್ಲಿ 1966ರ ಮಾರ್ಚ್ ನಲ್ಲಿ ತನ್ನ ತಂದೆ ರಾಜೇಶ್ ಪೈಲಟ್ ವಾಯುಪಡೆಯ ಪೈಲಟ್ ಆಗಿ ಬಾಂಬ್ ಗಳನ್ನು ಎಸೆದಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಂಗಳವಾರ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.

ಮಾಳವೀಯ ಅವರ ಹೇಳಿರುವ ವಿಷಯ ಹಾಗೂ ದಿನಾಂಕ ತಪ್ಪಾಗಿವೆ. ನನ್ನ ತಂದೆ ಆ ವರ್ಷದ ಅಕ್ಟೋಬರ್ ನಲ್ಲಿ ವಾಯುಪಡೆಗೆ ಸೇರಿದ್ದರು ಎಂದು ದಾಖಲೆ ಸಮೇತ ಪ್ರತಿಕ್ರಿಯಿಸಿದ್ದಾರೆ.

ಮಾರ್ಚ್ 5, 1966 ರಂದು ಮಿಝೋರಾಂನ ರಾಜಧಾನಿ ಐಜ್ವಾಲ್ ನಲ್ಲಿ ಬಾಂಬ್ ದಾಳಿ ಮಾಡಿದ ಭಾರತೀಯ ವಾಯುಪಡೆಯ ವಿಮಾನಗಳನ್ನು ರಾಜೇಶ್ ಪೈಲಟ್ ಹಾಗೂ ಸುರೇಶ್ ಕಲ್ಮಾಡಿ ಹಾರಿಸುತ್ತಿದ್ದರು ಎಂದು ಮಾಳವಿಯಾ X ನಲ್ಲಿನ ಪೋಸ್ಟ್ ನಲ್ಲಿ ಹೇಳಿದ್ದರು.

“ನಂತರ ಇಬ್ಬರೂ ಕಾಂಗ್ರೆಸ್ ಟಿಕೆಟ್ ಗಳಲ್ಲಿ ಸಂಸದರಾಗಿದರು. ಸರಕಾರದಲ್ಲಿ ಮಂತ್ರಿಗಳಾದರು, ಈಶಾನ್ಯದಲ್ಲಿ ತಮ್ಮದೇ ಜನರ ಮೇಲೆ ವಾಯುದಾಳಿ ನಡೆಸಿದವರಿಗೆ ಇಂದಿರಾ ಗಾಂಧಿ ಅವರು ರಾಜಕೀಯದಲ್ಲಿ ಸ್ಥಾನವನ್ನು ಪ್ರತಿಫಲವಾಗಿ ನೀಡಿ ಗೌರವ ನೀಡಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ಹಿಂದಿಯಲ್ಲಿ ಮಾಳವೀಯ ಪೋಸ್ಟ್ ಮಾಡಿದ್ದರು.

ಬಿಜೆಪಿ ನಾಯಕ ಮಾಳವೀಯಗೆ ತಕ್ಕ ಎದಿರೇಟು ನೀಡಿದ ಪೈಲಟ್, “ಅಮಿತ್ ಮಾಳವೀಯ ಅವರೇ, ನೀವು ತಪ್ಪು ದಿನಾಂಕಗಳನ್ನು ಹೊಂದಿದ್ದೀರಿ, ತಪ್ಪು ಸತ್ಯಗಳನ್ನು ಹೊಂದಿದ್ದೀರಿ…ಹೌದು, ಭಾರತೀಯ ವಾಯುಪಡೆಯ ಪೈಲಟ್ ಆಗಿ, ನನ್ನ ದಿವಂಗತ ತಂದೆ ಬಾಂಬ್ ಗಳನ್ನು ಹಾಕಿದ್ದರು. ಆದರೆ 1971ರಲ್ಲಿ ಇಂಡೋ-ಪಾಕ್ ಯುದ್ದ ಸಂದರ್ಭದಲ್ಲಿ ಹಿಂದಿನ ಪೂರ್ವ ಪಾಕಿಸ್ತಾನದಲ್ಲಿ. ಬಾಂಬ್ ಹಾಕಿದ್ದರು. ನೀವು ಹೇಳುವಂತೆ ಮಾರ್ಚ್ 5, 1966 ರಂದು ಮಿಝೋರಾಂನಲ್ಲಿ ಬಾಂಬ್ ಹಾಕಿದ್ದಲ್ಲ. ನನ್ನ ತಂದೆ 29 ಅಕ್ಟೋಬರ್ 1966 ರಂದು IAF ಗೆ ನೇಮಕಗೊಂಡರು! (ಪ್ರಮಾಣಪತ್ರ ಲಗತ್ತಿಸಲಾಗಿದೆ). ಜೈ ಹಿಂದ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು” ಎಂದು ಪೈಲಟ್ X ನಲ್ಲಿ ಹೇಳಿ್ದಾರೆ

ಪೈಲಟ್ ಹಂಚಿಕೊಂಡಿರುವ ಪ್ರಮಾಣಪತ್ರದ ಪ್ರಕಾರ ಅಕ್ಟೋಬರ್ 29, 1966ರಲ್ಲಿ ಭಾರತೀಯ ವಾಯುಪಡೆಗೆ ರಾಜೇಶ್ ಪೈಲಟ್ ಅವರನ್ನು ನಿಯೋಜಿಸಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!