ನವೆಂಬರ್ 25ರ ಶನಿವಾರ ರಾಜಸ್ಥಾನ ವಿಧಾನಸಭೆಯ 199 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಶೇ 75.45 ಮತದಾನ ನಡೆದಿದ್ದು ಮತದಾರರು 1892 ಅಭ್ಯರ್ಥಿಗಳ ಭವಿಷ್ಯವನ್ನು ಮತಪೆಟ್ಟಿಗೆ ಒಳಗೆ ಇರಿಸಿದ್ದಾರೆ. ಇನ್ನು ಫಲಿತಾಂಶ ಡಿಸೆಂಬರ್ 3ರಂದು ಹೊರಬೀಳಲಿದ್ದು ಇಂದು ( ನವೆಂಬರ್ 30 ) ವಿವಿಧ ಮಾಧ್ಯಮ ಏಜೆನ್ಸಿಗಳು ಎಕ್ಸಿಟ್ ಪೋಲ್‌ಗಳನ್ನು ಘೋಷಿಸಿವೆ.
ಕಳೆದ ಬಾರಿ 99 ಸ್ಥಾನಗಳನ್ನು ಗೆದ್ದು ಇನ್ನೊಂದು ಸ್ಥಾನದ ಬೆಂಬಲವನ್ನು ಬಹುಜನ ಸಮಾಜವಾದಿ ಪಕ್ಷದಿಂದ ಪಡೆದುಕೊಂಡು ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಬಾರಿಯೂ ಗೆಲುವಿನ ಲೆಕ್ಕಾಚಾರದಲ್ಲಿದ್ದರೆ, ಸೋಲನ್ನು ಅನುಭವಿಸಿದ್ದ ಬಿಜೆಪಿ ಬಹುಮತ ಪಡೆಯುವ ನಿರೀಕ್ಷೆಯಲ್ಲಿದೆ. ಹಾಗಿದ್ದರೆ ಯಾವ ಎಕ್ಸಿಟ್ ಪೋಲ್ ಪ್ರಕಾರ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಸಟ್ಟಾ ಬಜಾರ್ ಬಿಜೆಪಿ 115 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ 68 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ.
* ಸಿಎನ್‌ಎನ್ – ನ್ಯೂಸ್ 18 ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ 111 ಸ್ಥಾನ, ಕಾಂಗ್ರೆಸ್ 74 ಸ್ಥಾನ, ಇತರೆ 14 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
* ಜನ್ ಕಿ ಬಾತ್ ವರದಿ ಪ್ರಕಾರ ಬಿಜೆಪಿ 100 ರಿಂದ 122 ಸ್ಥಾನ, ಕಾಂಗ್ರೆಸ್ 62 ರಿಂದ 85 ಹಾಗೂ ಇತರೆ 14 ರಿಂದ 15 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿದು ಬಂದಿದೆ.
* ಟಿವಿ9 ಭಾರತ್‌ವರ್ಷ್ ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ಬಿಜೆಪಿ 100 ರಿಂದ 110 ಸ್ಥಾನಗಳಲ್ಲಿ ಗೆದ್ದರೆ ಕಾಂಗ್ರೆಸ್ 90ರಿಂದ 100 ಹಾಗೂ ಇತರೆ 5ರಿಂದ 15 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
* ಟೈಮ್ಸ್ ನೌ ಇಟಿಜಿ ಬಿಜೆಪಿ 110ರಿಂದ 128 ಸ್ಥಾನ, ಕಾಂಗ್ರೆಸ್ 56-72 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
* ಏಕ್ಸಿಸ್ ಮೈ ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಕಾಂಗ್ರೆಸ್ 86 ರಿಂದ 106 ಸ್ಥಾನಗಳಲ್ಲಿ ಗೆಲ್ಲಲಿದ್ದರೆ, ಬಿಜೆಪಿ 80ರಿಂದ 100 ಸ್ಥಾನಗಳಲ್ಲಿ ಗೆಲ್ಲಲಿದೆ, ಇತರೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು 9ರಿಂದ 18 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿದೆ.
* ಸಿ ವೋಟರ್ ಪ್ರಕಾರ ಕಾಂಗ್ರೆಸ್ 127 ರಿಂದ 135, ಬಿಜೆಪಿ 87 ರಿಂದ 105 ಹಾಗೂ ಇತರರು 5ರಿಂದ 15 ಸೀಟ್ ಗೆಲ್ಲಬಹುದು ಎಂದು ವರದಿ ಮಾಡಲಾಗಿದೆ.
* ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ 80ರಿಂದ 90, ಕಾಂಗ್ರೆಸ್ 94ರಿಂದ 104 ಹಾಗೂ ಇತರೆ ಪಕ್ಷಗಳು 14ರಿಂದ 18 ಸ್ಥಾನಗಳಲ್ಲಿ ಗೆಲ್ಲಲಿವೆ.
* ಮೆಟ್ರೈಜ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 125 ರಿಂದ 135, ಬಿಜೆಪಿ 87 ರಿಂದ 107 ಹಾಗೂ ಇತರೆ ಪಕ್ಷಗಳು 8 ರಿಂದ 105 ಸ್ಥಾನಗಳಲ್ಲಿ ಗೆಲ್ಲಲಿದೆ.