Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ದೇಶದ ಜನರಿಗಾಗಿ ಗುಂಡೇಟು ತಿನ್ನಲು ರಾಹುಲ್ ಸಿದ್ದ ನನ್ನ ತಮ್ಮನನ್ನು ನೋಡಿ ಕಲಿಯಿರಿ : ಮೋದಿಗೆ ಪ್ರಿಯಾಂಕಾ ಟಾಂಗ್

ಜಮಖಂಡಿ : ಜನರ ಕಷ್ಟಗಳನ್ನು ಆಲಿಸುವ ಪ್ರಧಾನಿಗಳನ್ನು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ತಮ್ಮನ್ನು ನಿಂದಿಸುತ್ತಿದ್ದಾರೆ ಅಂತಾ ಜನರೆದರು ತಮ್ಮ ಕಷ್ಟಗಳನ್ನು ಹೇಳಿಕೊಂಡ ಪ್ರಧಾನಿಯನ್ನು ನೋಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಲೇವಡಿ ಮಾಡಿದರು.

ನನ್ನ ಸಹೋದರನಿಂದ ಪ್ರಧಾನಿ ಮೋದಿ ಕಲಿಯಬೇಕಿದೆ. ಏಕೆಂದ್ರೆ ದೇಶದ ಜನರಿಗಾಗಿ ನನ್ನ ಸಹೋದರ (ರಾಹುಲ್) ಗಾಲಿ, ಗೋಲಿ (ಬೈಗುಳ ಮತ್ತು ಗುಂಡು) ತಿನ್ನಲು ಸಿದ್ಧನಿದ್ದೇನೆ ಅಂತಾರೆ, ಆದರೆ ಮೋದಿ ನಿಂದನೆಗೆ ಹೆದರುತ್ತಿದ್ದಾರೆ. ಮೋದಿಯವರೇ ಹೆದರಬೇಡಿ. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಸಾಮಾನ್ಯ ಎಂದು ಪ್ರಿಯಾಂಕಾ ಲೇವಡಿ ಮಾಡಿದರು.

ಬಹಳಷ್ಟು ಪ್ರಧಾನಿಗಳನ್ನು ನೋಡಿದ್ದೇನೆ. ಇಂದಿರಾಗಾಂಧಿ ದೇಶಕ್ಕಾಗಿ‌ ಗುಂಡು ಹಾಕಿಸಿಕೊಂಡರು, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಆದರೆ ಇದೇ ಮೊದಲ ಬಾರಿಗೆ ಪ್ರಧಾನಿ ಅವರು ಜನರ‌ ಸಮಸ್ಯೆ ಬಗೆಹರಿಸುವ ಬದಲು ತಾವೇ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆ ಬಗ್ಗೆ ಮೋದಿ ಅವರ ಕಚೇರಿಯಲ್ಲಿ ಪಟ್ಟಿ ಕೂಡ ಮಾಡುವುದಿಲ್ಲ. ಬದಲಾಗಿ ನನ್ನ ಎಷ್ಟು ಸಲ ಬೈದಿದ್ದಾರೆ ಅಂತ ಲಿಸ್ಟ್ ಮಾಡುತ್ತಾರೆ. ಇವರಿಗೆ ಬೈದಿದ್ದನ್ನು ನೋಡಿದ್ರೆ ಒಂದು ಪುಟ ಕೂಡ ತುಂಬಲ್ಲ. ಆದ್ರೆ ಗಾಂಧಿ ಕುಟುಂಬವನ್ನು ನಿಂದಿಸಿದ್ದನ್ನು ಪಟ್ಟಿ ಮಾಡಿದ್ರೆ ಪುಸ್ತಕಗಳ ಮೇಲೆ ಪುಸ್ತಕ ಪ್ರಿಂಟ್ ಹಾಕಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

“ಸ್ವಲ್ಪ ಧೈರ್ಯ ಮಾಡಿ ಮೋದಿಜಿ ಮತ್ತು ನನ್ನ ಸಹೋದರನಿಂದ ಕಲಿಯಿರಿ, ಅವರು ಸತ್ಯದ ಪರವಾಗಿ ನಿಲ್ಲುತ್ತಾರೆ, ನಿಂದಿಸಲಿ, ಗುಂಡು ಹಾರಿಸಲಿ ಅಥವಾ ಚಾಕುವಿನಿಂದ ಇರಿದರೂ ದೇಶದ ಜನರ ಪರವಾಗಿರುತ್ತೇನೆ ಎಂದು ರಾಹುಲ್ ಹೇಳಿದ್ದಾಗಿ ಪ್ರಿಯಾಂಕಾ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ