Mysore
17
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಪಂಜಾಬ್: ಹಣ ಸುಲಿಯುವ ಖಾಸಗಿ ಶಿಕ್ಷಣ ಸಂಸ್ಥೆಗಳ ತನಿಖೆಗೆ ಸಮಿತಿ

ಚಂಡೀಗಡ : ಖಾಸಗಿ ಶಾಲೆಗಳ ವಿರುದ್ಧ ಸಲ್ಲಿಕೆಯಾದ ದೂರುಗಳನ್ನು ತನಿಖೆಗೆ ಒಳಪಡಿಸಲು ಪ್ರತಿ ಜಿಲ್ಲೆಗಳಲ್ಲೂ ವಿಶೇಷ ತಂಡ ರಚಿಸಲಾಗುವುದು ಎಂದು ಪಂಜಾಬ್‌ನ ಮುಖ್ಯಮಂತ್ರಿ ಭಗವಂತ ಮಾನ್ ನೇತೃತ್ವದ ಆಪ್ ಸರ್ಕಾರ ಘೋಷಿಸಿದೆ.
ಖಾಸಗಿ ಶಾಲೆಗಳು ದಾಖಲಾತಿ ಶುಲ್ಕ, ಪುಸ್ತಕ, ಜೆರಾಕ್ಸ್ ಕಾಪಿ ಹಾಗೂ ದೇಣಿಗೆ ಸಂಗ್ರಹ ಮುಂತಾದುವುಗಳಿಂದ ಹಣವನ್ನು ಕೊಳ್ಳೆ ಹೊಡೆಯುತ್ತಿವೆ ಎಂದು ವಿದ್ಯಾರ್ಥಿಗಳ ಹೆತ್ತವರಿಂದ ಹಲವಾರು ದೂರುಗಳು ಬಂದಿವೆ. ಹೀಗಾಗಿ ಈ ನಿರ್ಧಾರವನ್ನು ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ತೆಗೆದುಕೊಂಡಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ತಂಡದಲ್ಲಿ ಒಂದು ಜಿಲ್ಲೆಯಿಂದ ಮೂವರು ಪ್ರಾಂಶುಪಾಲರು ಇರಲಿದ್ದು, ಅವರು ಶಿಕ್ಷಣ ಸಚಿವರಿಗೆ ಸಲ್ಲಿಕೆಯಾದ ದೂರುಗಳನ್ನು ಪರಿಶೀಲಿಸಿ ಖಾಸಗಿ ಶಾಲೆಗಳ ವಿರುದ್ಧ ತನಿಖೆ ನಡೆಸುತ್ತಾರೆ. ನಂತರ ತನಿಖಾ ವರದಿಯನ್ನು ಸಂಬಂಧಿಸಿದ ನಿಯಂತ್ರಣ ಪ್ರಾಧಿಕಾರಕ್ಕೆ ನೀಡುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
’ಕೇವಲ ಒಂದನೇ ತರಗತಿಯ ಪಠ್ಯ ಪುಸ್ತಕಗಳಿಗೆ ಖಾಸಗಿ ಶಾಲೆಯೊಂದು ₹7,000 ದರ ವಿಧಿಸಿರುವುದು ಕಂಡು ಆಶ್ಚರ್ಯವಾಯಿತು. ನಮ್ಮ ಸರ್ಕಾರ ಶಿಕ್ಷಣವನ್ನು ವ್ಯಾಪಾರವಾಗಲು ಬಿಡುವುದಿಲ್ಲ. ಕಾನೂನು ನಿಯಮಗಳಿಗೆ ಒಳಪಟ್ಟಂತೆ ನಾವು ನಿರ್ಧಾರ ಕೈಗೊಂಡಿದ್ದು, ಅದನ್ನು ಮೀರಲು ಬಿಡುವುದಿಲ್ಲ.’ ಎಂದು ಶಿಕ್ಷಣ ಸಚಿವರು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!