Mysore
20
overcast clouds
Light
Dark

ಅರಣ್ಯದಂಚಿನ ಜಮೀನುಗಳಲ್ಲಿ ದಾಂದಲೆ ನಡೆಸುತ್ತಿದ್ದ ಪುಂಡಾನೆ ಸೆರೆ

ಅಂತರಸಂತೆ : ನಾಗರಹೊಳೆ ಸೊಳ್ಳೆಪುರ ಅರಣ್ಯದ ಮಂಟಳ್ಳಿ ಬೀಳು ಎಂಬಲ್ಲಿ ಶನಿವಾರ ಬೆಳಗಿನ ಜಾವ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ 50 ರಿಂದ 55 ವರ್ಷದ ಗಂಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ನಾಗರಹೊಳೆ ಸಹಾಯಕ ನಿರ್ದೇಶಕ ಧನಂಜಯ ಮಾತನಾಡಿ, ಕಳೆದ ಹಲವು ತಿಂಗಳಿಂದ ವೀರನಹೊಸಹಳ್ಳಿ ಅರಣ್ಯದಂಚಿನಲ್ಲಿ ದಾಂದಲೆ ನಡೆಸಿ ರೈತರ ಫಸಲು ನಷ್ಟ ಮಾಡುತ್ತಿದ್ದ ಆನೆಯನ್ನು ಬಂಧಿಸುವ ನಿಟ್ಟಿನಲ್ಲಿ ಇಲಾಖೆ ಮೂರು ದಿನದಿಂದ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಆನೆಗಳಾದ ಅಭಿಮನ್ಯು, ಮಹೇಂದ್ರ, ಭೀಮ (ಮಹಾರಾಷ್ಟ್ರ) ಭೀಮ‌ ಕರ್ನಾಟಕ, ಹರ್ಷ, ಅಶ್ವತ್ಥಾಮ ಆನೆ ಮತ್ತು ಇಲಾಖೆಯ 70 ಸಿಬ್ಬಂದಿ ಭಾಗವಹಿಸಿದ್ದರು.

ಅರಣ್ಯದಲ್ಲಿ ಇಂದು ಸೆರೆಹಿಡಿದ ಆನೆ ಅಭಿಮನ್ಯು ಗಿಂತಲೂ ದೊಡ್ಡದಾಗಿದ್ದು, ಇದನ್ನು ಪಳಗಿಸಲು ಮತ್ತಿಗೋಡು ಆನೆ ಶಿಬಿರಕ್ಕೆ ಕಳುಹಿಸಲಾಗುವುದು ಎಂದು ಡಿ.ಸಿ.ಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ