Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಸಿಂಗಾಪುರದ 7 ಉಪಗ್ರಹಗಳನ್ನು ಹೊತ್ತು ಯಶಸ್ವಿಯಾಗಿ ಉಡಾವಣೆಯಾದ ಪಿಎಸ್​ಎಲ್​ವಿ-ಸಿ56

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪ್ರಾಥಮಿಕ ಉಪಗ್ರಹ ಡಿಎಸ್-ಎಸ್‌ಎಆರ್, 6 ಸಹ-ಪ್ರಯಾಣಿಕ ಉಪಗ್ರಹಗಳು ಸೇರಿದಂತೆ 7 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 56 ರಾಕೆಟ್‌ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಂದು ಬೆಳಗ್ಗೆ 6:30ಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು. ಎಲ್ಲ ಏಳು ಉಪಗ್ರಹಗಳನ್ನು ಪಿಎಸ್‌ಎಲ್‌ವಿ-ಸಿ 56 ರಾಕೆಟ್‌ ನಿಖರವಾಗಿ ಅವುಗಳ ಕಕ್ಷೆಗೆ ಸೇರಿಸಿದೆ.

ಡಿಎಸ್‌-ಎಸ್‌ಎಆರ್‌ ಮತ್ತು ಉಳಿದ 6 ಉಪಗ್ರಹಗಳು ಸಿಂಗಾಪುರಕ್ಕೆ ಸೇರಿದ್ದವಾಗಿವೆ. ಸಿಂಗಾಪುರದ ಎಸ್‌ಟಿ ಇಂಜಿನಿಯರಿಂಗ್‌ ಸಂಸ್ಥೆಗಾಗಿ ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಈ ಕಾರ್ಯಾಚರಣೆ ನಡೆಸಿದೆ.

ಡಿಎಸ್‌-ಎಸ್‌ಎಆರ್‌ ಉಪಗ್ರಹ ಸಿಂಗಾಪೂರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ ಮತ್ತು ಎಸ್‌ಟಿ ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಡಿಎಸ್‌-ಎಸ್‌ಎಆರ್‌ ಎಲ್ಲಾ ಹವಾಗುಣದಲ್ಲಿ ಹಗಲು-ರಾತ್ರಿ ಸೇವೆ ಒದಗಿಸುತ್ತದೆ. ಪೂರ್ಣ ಧ್ರುವೀಯತೆಯಲ್ಲಿ 1m-ರೆಸಲ್ಯೂಶನ್‌ನಲ್ಲಿ ಚಿತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ