Mysore
17
overcast clouds

Social Media

ಶುಕ್ರವಾರ, 09 ಜನವರಿ 2026
Light
Dark

ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು

ಮರಗಳನ್ನು ಕಡಿದು ಬೇರೆಡೆ ಸಾಗಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಸಂಸದ ಪ್ರತಾಪ್‌ ಸಿಂಹ ಅವರ ಸಹೋದರ ವಿಕ್ರಂ ಸಿಂಹಗೆ ಜಾಮೀನು ಮಂಜೂರಾಗಿದೆ.

ಹಾಸನದ ಬೇಲೂರು ಬಳಿಯ ನಂದಗೊಂಡನಹಳ್ಳಿಯಲ್ಲಿ 126 ಮರಗಳನ್ನು ಕಡಿದ ಆರೋಪದಡಿಯಲ್ಲಿ ವಿಕ್ರಂ ಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ವಿಕ್ರಂ ಸಿಂಹ ಪರ ವಕೀಲ ಚಂದ್ರೇಗೌಡ ಹಾಗೂ ಧರ್ಮೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಬೇಲೂರಿನ ಸೀನಿಯರ್‌ ಸಿವಿಲ್‌ ಜಡ್ಜ್‌ ಜಾಮೀನು ಮಂಜೂರು ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!