Mysore
24
scattered clouds

Social Media

ಬುಧವಾರ, 15 ಜನವರಿ 2025
Light
Dark

ಪ್ರಮೋದ್‌ ಮುತಾಲಿಕ್‌ಗೆ ಮತ್ತೆ ಗೋವಾ ಪ್ರವೇಶ ನಿಷೇಧ

ಪಣಜಿ : ದಕ್ಷಿಣ ಗೋವಾ ಜಿಲ್ಲಾಡಳಿವು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರಿಗೆ 60 ದಿನಗಳ ಕಾಲ ಜಿಲ್ಲೆಯೊಳಗೆ ಪ್ರವೇಶಿಸದಂತೆ ನಿಷೇಧ ಹೇರಿದೆ.

ಮುಂದಿನ 60 ದಿನಗಳ ಕಾಲ ಜಿಲ್ಲೆಯ ವ್ಯಾಪ್ತಿಯೊಗಳಗೆ ಪ್ರವೇಶಿಸದಂತೆ ಮುತಾಲಿಕ್‌ಗೆ ಜಿಲ್ಲಾಡಳಿತವು ಆದೇಶ ಹೊರಡಿಸಿದೆ. ಪ್ರಖರ ಹಿಂದುತ್ವವಾದಿಯಾಗಿರುವ ಮುತಾಲಿಕ್‌, ಜಿಲ್ಲೆಯಲ್ಲಿ ಕೋಮು ಭಾವನೆಗೆ ಧಕ್ಕೆ ತರುವಂತಹ, ಧರ್ಮಗಳ ಮಧ್ಯೆ ದ್ವೇಷ ಹರಡುವ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾರೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳ​ಲಾ​ಗಿದೆ.

ಈ ಹಿಂದೆಯೂ ಮುತಾಲಿಕ್‌ಗೆ ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳು ಜಿಲ್ಲೆ ಪ್ರವೇಶಿಸದಂತೆ ನಿಷೇಧ ಹೇರಿದ್ದರು.

ಹಿಂದೂಗಳು ಮನೆಯಲ್ಲಿ ಖಡ್ಗ, ತಲ್ವಾರ್‌ ಇಟ್ಟುಕೊಳ್ಳಿ : ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ಖಡ್ಗ, ತಲವಾರ್‌, ಮತ್ತಿತರ ಜೀವರಕ್ಷಕ ಆಯುಧಗಳನ್ನು ಇಟ್ಟುಕೊಳ್ಳಬೇಕು. ಆಯುಧಗಳನ್ನು ಇಟ್ಟುಕೊಂಡವರನ್ನೆಲ್ಲಾ ಬಂಧಿಸುವುದಾದರೆ ಮೊದಲು ಕೈಯಲ್ಲಿ ಹತ್ತಾರು ಆಯುಧಗಳನ್ನು ಹಿಡಿದ ದುರ್ಗಾದೇವಿಯನ್ನು, ಗದೆ ಹಿಡಿದ ಹನುಮಂತನನ್ನು ಬಂಧಿಸಲಿ ನೋಡೋಣ ಎಂದು ಶ್ರೀರಾಮ ಸೇನೆ ಮುಖಂಡ ಮುತಾಲಿಕ್‌ ಇತ್ತೀಚೆಗೆ ಸವಾಲು ಹಾಕಿ​ದ್ದರು. ಬಾಗಲಕೋಟೆ ನಗ​ರ​ದಲ್ಲಿ ಭಾನು​ವಾ​ರ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ​ಗಳು ಯಾರನ್ನೋ ಹೊಡೆಯಲು ಅಲ್ಲ, ಬದಲಿಗೆ ಗೋವುಗಳು ಹಾಗೂ ನಮ್ಮ ಅಕ್ಕ-ತಂಗಿಯರ ಹಾಗೂ ರಾಷ್ಟ್ರ, ಮಠ-ಮಂದಿರಗಳ ರಕ್ಷಣೆಗೆ ಆಯುಧಗಳನ್ನು ಬಳಸಬೇಕು ಎಂದ​ರು.

ಹಿಂದೂ ಕಾರ್ಯಕರ್ತರು, ಹೋರಾಟಗಾರರಿಗೆ ಹಾಗೂ ನನ್ನಂಥವ​ರಿಗೆ ಬಿಜೆಪಿಯಿಂದ ದ್ರೋಹ ಮಾಡಲಾಗಿದೆ. ನಮ್ಮ ರಕ್ತವನ್ನು ಬೆವರಾಗಿ ಹರಿಸಿ ಅಧಿಕಾರದ ಗದ್ದುಗೆಗೆ ಏರಿಸಿದ್ದಕ್ಕಾದರೂ ಕರುಣೆ ಇಲ್ಲದ ಬಿಜೆಪಿಗೆ ಈ ಬಾರಿಯ ಚುನಾ​ವ​ಣೆ​ಯಲ್ಲಿ ಕಾರ್ಕಳದಲ್ಲಿ ಸ್ಪರ್ಧಿಸಿ ಗೆದ್ದು ತೋರಿ​ಸು​ತ್ತೇವೆ ಎಂದು ಹೇಳಿ​ದ​ರು. ಹಿಂದೂ ಹುಡು​ಗಿ​ಯ​ರಿ​ಗೂ ಉದ್ಯೋ​ಗ​: ಲವ್‌ ಜಿಹಾದ್‌ಗೆ ನಮ್ಮ ಒಬ್ಬ ಹುಡುಗಿ ಹೋದರೆ ನಮ್ಮ ತರುಣರು 10 ಮುಸ್ಲಿಮ್‌ ಹುಡುಗಿರನ್ನು ಕರೆತರುವ ತಾಕತ್ತು ಹೊಂದಿದ್ದಾರೆ. ಹಾಗೆ ಕರೆತಂದರೆ ಶ್ರೀರಾಮಸೇನೆ ಅಂಥ ಯುವಕರಿಗೆ ಉದ್ಯೋಗ ಒದಗಿಸಲು ನೆರವಾಗುವ ಜತೆಗೆ ರಕ್ಷಣೆಯನ್ನೂ ನೀಡಲಿದೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ