ಅಹಮದಾಬಾದ್: ದೇಶಾದ್ಯಂತ ನೂತನ 10 ಹೊಸ ವಂದೇ ಭಾರತ್ ರೈಲುಗಳು ಮತ್ತು ಇತರ ರೈಲು ಸೇವೆಗಳಿಗೆ ಇಂದು (ಮಾ.12) ಗುಜರಾತ್ನ ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ, ಸಂಪರ್ಕ ಮತ್ತು ಪೆಟ್ರೋಕೆಮಿಕಲ್ ವಲಯವನ್ನು ಉತ್ತೇಜಿಸುವ ಸಲುವಾಗಿ ಇಂದು ಈ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನ ನೀಡಿದ್ದಾರೆ. ಮತ್ತು ರೈಲ್ವೆ ವರ್ಕ್‌ಶಾಪ್‌ಗಳು, ಲೋಕೋ ಶೆಡ್‌ಗಳು ಮತ್ತು ಪಿಟ್‌ಲೈನ್‌ಗಳು/ಕೋಚಿಂಗ್ ಡಿಪೋಗಳು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
10 ಹೊಸ ವಂದೇ ಭಾರತ್ ರೈಲುಗಳಲ್ಲಿ ಮೈಸೂರಿನಿಂದ ಚೆನ್ನೈ ಮಾರ್ಗವಾಗಿ ಎರಡನೇ ವಂದೇ ಭಾರತ ರೈಲಿಗೂ ಸಹಾ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಈ ರೈಲು ಏಪ್ರಿಲ್ ನಲ್ಲಿ ತನ್ನ ಕಾರ್ಯಾರಂಭ ಮಾಡಲಿದೆ.