ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊ ಹರಿಬಿಟ್ಟ ಇಬ್ಬರನ್ನು ಇಂದು ( ಮೇ 28 ) ಎಸ್‌ಐಟಿ ಅಧಿಕಾರಿಗಳು ಕೊನೆಗೂ ಬಂಧಿಸಿದ್ದಾರೆ.
ಅಶ್ಲೀಲ ವಿಡಿಯೊಗಳು ಬಿಡುಗಡೆಗೊಳ್ಳುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಕೌಂಟ್‌ಡೌನ್ ಪೋಸ್ಟ್ ಹಂಚಿಕೊಂಡಿದ್ದ ನವೀನ್ ಗೌಡ ವಿಡಿಯೊ ಬಿಡುಗಡೆ ಮಾಡುವುದಾಗಿ ಪೋಸ್ಟ್ ಹಂಚಿಕೊಂಡು ಬಳಿಕ ಅಕೌಂಟ್ ನಿಷ್ಕ್ರಿಯೆಗೊಳಿಸಿದ್ದ. ಜೆಡಿಎಸ್ ದೂರು ನೀಡಿದ ಬಳಿಕ ತಲೆ ಮರೆಸಿಕೊಂಡಿದ್ದ ಈತ ಇಂದು ಚೇತನ್ ಜತೆಗೂಡಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಹಾಜರಾಗಿದ್ದ. ಈ ವೇಳೆ ಎಸ್‌ಐಟಿ ಅಧಿಕಾರಿಗಳು ನವೀನ್ ಗೌಡ ಹಾಗೂ ಚೇತನ್ ಇಬ್ಬರನ್ನೂ ಸಹ ಬಂಧಿಸಿದ್ದಾರೆ.





