Mysore
26
scattered clouds

Social Media

ಬುಧವಾರ, 15 ಜನವರಿ 2025
Light
Dark

ಪಾಂಡವಪುರ: ಕೊಟ್ಟಿಗೆಯಲ್ಲಿದ್ದ ಮೇಕೆಗಳ ಮೇಲೆ ಚಿರತೆ ಹಿಂಡು ದಾಳಿ

6 ಮೇಕೆಗಳನ್ನು ಸಾಯಿಸಿ, ನಾಲ್ಕನ್ನು ಹೊತ್ತೊಯ್ದ ಚಿರತೆಗಳು, ತಾಲ್ಲೂಕಿನಲ್ಲಿ ಮುಂದುವರಿದ ಚಿರತೆ ಹಾವಳಿ

ಪಾಂಡವಪುರ: ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಮೇಕೆಗಳ ಮೇಲೆ ದಾಳಿ ಮಾಡಿರುವ ಚಿರತೆಗಳ ಹಿಂಡು ಆರು ಮೇಕೆಗಳನ್ನು ಸಾಯಿಸಿ, ನಾಲ್ಕು ಮೇಕೆಗಳನ್ನು ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ಗಿರಿಯಾರಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಗ್ರಾಮದ ನಾಗೇಗೌಡ ಎಂಬವರ ಮೇಕೆಗಳ ಮೇಲೆ ದಾಳಿ ಮಾಡಿರುವ ಚಿರತೆಗಳು ಹೊತ್ತೊಯ್ದಿವೆ. ಮನೆಯ ಹಿಂದಿನ ಕೊಟ್ಟಿಗೆಯಲ್ಲಿ 20 ಮೇಕೆಗಳನ್ನು ಸಾಕಿದ್ದರು. ಭಾನುವಾರ ಮಧ್ಯರಾತ್ರಿ ಕೊಟ್ಟಿಗೆಗೆ ಮರ‍್ನಾಲ್ಕು ಚಿರತೆಗಳು ಒಟ್ಟಿಗೆ ದಾಳಿ ಮಾಡಿ  ಆರು ಮೇಕೆಗಳನ್ನು ಸಾಯಿಸಿ, ನಾಲ್ಕು ಮೇಕೆಗಳನ್ನು ಹೊತ್ತೊಯ್ದಿವೆ.

ಸ್ಥಳಕ್ಕೆ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಕ್ರಮವಹಿಸಿ ಮೇಕೆ ಮಾಲೀಕರಾದ ನಾಗೇಗೌಡ ಅವರಿಗೆ ಸೂಕ್ತ ಪರಿಹಾರ ಸೇರಿದಂತೆ ಗ್ರಾಮದಲ್ಲಿರುವ ಚಿರತೆಗಳನ್ನು ಸೆರೆ ಹಿಡಿಯಲು ಬೋನುಗಳನ್ನು ಅಳವಡಿಸುವಂತೆ ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಭಯಭೀತರಾದ ಗ್ರಾಮಸ್ಥರು:

ಒಟ್ಟಿಗೆ ಮೂರ‍್ನಾಲ್ಕು ಚಿರತೆ ದಾಳಿ ಮಾಡಿ ಆರು ಮೇಕೆಗಳನ್ನು ಸಾಯಿಸಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಿಂದೆಂದೂ ಇಂತಹ ಪ್ರಕರಣಗಳು ನಡೆದಿರಲಿಲ್ಲ. ಆದರೆ, ಚಿರತೆಗಳು ಸುಮಾರು 16 ಮೇಕೆಗಳನ್ನು ಸಾಯಿಸಿರುವುದರಿಂದ ಎಷ್ಟು ಚಿರತೆಗಳು ದಾಳಿ ಮಾಡಿರಬಹುದು ಎಂಬುದೇ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ