Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಮ್ಮ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ: ಅಣ್ಣಾಮಲೈ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣದಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರ ಇಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಬೇರೆ ಜೆಡಿಎಸ್‌ ಬೇರೆ, ಚುನಾವಣೆಯ ಹಿನ್ನಲೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅಷ್ಟೇ. ಹೀಗಾಗಿ ಪ್ರಜ್ವಲ್‌ ರೇವಣ್ಣ ಪ್ರಕರಣದಿಂದ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರವಾಗುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ತತ್ವ ಸಿದ್ಧಾಂತ ಬೇರೆ. ಒಂದು ವೇಳೆ ನಾವಿಬ್ಬರು ಒಂದು ಎನ್ನುವುದಾದರೆ ಜೆಡಿಎಸ್‌ ಪಕ್ಷ ನಮ್ಮ ಪಕ್ಷದೊಳಗೆ ವಿಲೀನವಾಗಬೇಕಿತ್ತು ಎಂದರು.

ಎಸ್‌ಐಟಿ ತನಿಖೆ ಚುರುಕುಗೊಳಿಸಿ : ಸಾರ್ವಜನಿಕರಾಗಿ ಅಥವ ರಾಜಕಾರಣಿಗಳ ಮಾತಿನಿಂದ ಈ ಪ್ರಕರಣದ ಸಂತ್ರಸ್ತರಿಗೆ ನ್ಯಾ ಸಿಗಲು ಸಾಧ್ಯವೇ? ಸಂತ್ರಸ್ತ ಹೆಣ್ಣು ಮಕಳ್ಳಿಗೆ ನ್ಯಾಯ ಸಿಗಬೇಕಾದರೆ ವೇಗವಾಗಿ ತನಿಖೆ ಆಗಬೇಕು.  ಹಾಗಾದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದರು.

 

Tags: