ಸ್ಟಾಕ್‌ಹೋಮ್ (ಸ್ವೀಡನ್) : ಕೋವಿಡ್-19 ಲಸಿಕೆ ಅಭಿವೃದ್ಧಿಗೆ ಸುಗಮ ಮಾರ್ಗ ಕಲ್ಪಿಸಿದ್ದ ಮೆಸೆಂಜರ್ ಆರ್‌ಎನ್‌ಎ ತಂತ್ರಜ್ಞಾನ ಕುರಿತು ಕಾರ್ಯಕ್ಕಾಗಿ ಹಂಗರಿಯ ಕಾಟಾಲಿನ್ ಕಾರಿಕೊ ಮತ್ತು ಅಮೆರಿಕದ ಡ್ರೂ ವೈಸ್‌ಮನ್ ಅವರು ಸೋಮವಾರ ನೊಬೆಲ್ ವೈದ್ಯಕೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಕಾರಿಕೊ ಮತ್ತು ವೈಸ್‌ಮನ್ ಡಿ.10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ವಿಧ್ಯುಕ್ತ ಸಮಾರಂಭದಲ್ಲಿ ದೊರೆ ಕಾರ್ಲ್ 16ನೇ ಗುಸ್ತಾಫ್ ಅವರಿಂದ ಡಿಪ್ಲೋಮಾ,ಸ್ವರ್ಣ ಪದಕ ಮತ್ತು 10 ಲ.ಡಾ.ಗಳ ಚೆಕ್ ಒಳಗೊಂಡ ತಮ್ಮ ಬಹುಮಾನವನ್ನು ಸ್ವೀಕರಿಸಲಿದ್ದಾರೆ.





