Mysore
26
broken clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ನಾರ್ವೆ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ

ಸ್ಟಾಕ್‌ಹೋಮ್: ನಾಟಕಕಾರ, ಕಾದಂಬರಿಕಾರ ಹಾಗೂ ನಾರ್ಡಿಕ್ ಬರವಣಿಗೆಯ ಮಾಸ್ಟರ್ ಜಾನ್ ಫಾಸ್ಸೆ ಅವರಿಗೆ 2023ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭಿಸಿದೆ.

ಜಾನ್ ಫಾಸ್ಸೆ ಅವರ ಕಾದಂಬರಿಗಳು ಧ್ವನಿ ಇಲ್ಲದವರಿಗೆ ದನಿಯಾಗಿವೆ ಎಂದು ನೊಬೆಲ್ ಪ್ರಶಸ್ತಿ ಅಕಾಡೆಮಿ ಬಣ್ಣಿಸಿದೆ.

ಫಾಸ್ಸೆ ಅವರ ಕೆಲಸವು “ಅವರ ನಾರ್ವೇಜಿಯನ್ ಹಿನ್ನೆಲೆಯ ಭಾಷೆ ಮತ್ತು ಸ್ವಭಾವದಲ್ಲಿ” ಬೇರೂರಿದೆ ಎಂದು ನೊಬೆಲ್ ಸಾಹಿತ್ಯ ಸಮಿತಿಯ ಅಧ್ಯಕ್ಷ ಆಂಡರ್ಸ್ ಓಲ್ಸನ್ ಅವರು ಹೇಳಿದ್ದಾರೆ.

ಫಾಸ್ಸೆ ಅವರ ಹಲವಾರು ನಾಟಕಗಳು, ಕಾದಂಬರಿಗಳು, ಕವನ ಸಂಕಲನಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಮತ್ತು ಭಾಷಾಂತರಗಳನ್ನು ಒಳಗೊಂಡ ಹಲವು ಕೃತಿಗಳನ್ನು ಗೌರವಿಸಿ ಈ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

64 ವರ್ಷದ ಜಾನ್ ಫಾಸ್ಸೆ ಅವರು ಎರಡು ಡಜನ್‌ಗಿಂತಲೂ ಹೆಚ್ಚು ನಾಟಕಗಳನ್ನು ಬರೆದಿದ್ದು, ನಾಲ್ಕು ದಶಕಗಳ ಕಾಲ ಕಾದಂಬರಿಗಳು, ಪ್ರಬಂಧಗಳು, ಕವನ ಸಂಕಲನಗಳು ಮತ್ತು ಮಕ್ಕಳ ಪುಸ್ತಕಗಳನ್ನು ಕೂಡ  ಪ್ರಕಟಿಸಿದ್ದಾರೆ. ಇವರ ಲೇಖನ, ಬರಹಗಳು 40 ಭಾಷೆಗಳಲ್ಲೂ ಭಾಷಾಂತರಗೊಂಡಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!