Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಚೀತಾಗಳನ್ನು ಕರೆತಂದ ಸರ್ಕಾರದ ಕ್ರಮವನ್ನು ಪ್ರಶ್ನಿಸಲು ಕಾರಣಗಳಿಲ್ಲ: ಸುಪ್ರೀಂ ಕೋರ್ಟ್‌

ನವದೆಹಲಿ : ಭಾರತಕ್ಕೆ ಚೀತಾಗಳನ್ನು ತರಿಸಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಒಂಬತ್ತು ಚೀತಾಗಳ ಸಾವಿನ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಹೀಗೆ ಹೇಳಿದೆ.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಮರಿಗಳು ಸೇರಿದಂತೆ ಒಂಬತ್ತು ಚೀತಾಗಳು ಮೃತಪಟ್ಟಿವೆ. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ವಯಸ್ಕ ಚೀತಾಗಳನ್ನು ಪಾರ್ಕ್‌ಗೆ ತರಲಾಗಿತ್ತು. ನಂತರ ನಾಲ್ಕು ಮರಿಗಳು ಜನಿಸಿದ್ದವು. 1952ರಿಂದ ಅಳಿವಿನಂಚಿಗೆ ತಲುಪಿದ್ದ ಚೀತಾ ಸಂತತಿಯನ್ನು ದೇಶದಲ್ಲಿ ಮತ್ತೆ ಬೆಳೆಸುವ ಯತ್ನವಾಗಿ ಈ ಚೀತಾಗಳನ್ನು ತರಲಾಗಿತ್ತು.

ಚೀತಾಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಸೆಪ್ಟೆಂಬರ್‌ 2022ರಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ತರಲಾಗಿತ್ತು. ಇಲ್ಲಿನ ಹವಾಮಾನ ಮತ್ತು ಅದು ಚೀತಾಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸತತ ನಿಗಾ ಇಡಲಾಗುತ್ತಿದೆ ಎಂದು ಸರ್ಕಾರ ಸುಪ್ರೀಂ ಕೋರ್ಟಿಗೆ ಹೇಳಿತ್ತು.

“ಬಹಳಷ್ಟು ತಯಾರಿ ನಡೆಸಲಾಗುತ್ತದೆ. ಪ್ರತಿ ವರ್ಷ 12-14 ಚೀತಾಗಳನ್ನು ತರಲಾಗುತ್ತದೆ., ಸಮಸ್ಯೆಗಳಿವೆ ಆದರೆ ಆತಂಕಕಾರಿಯಲ್ಲ,” ಎಂದು ಸರ್ಕಾರ ತಿಳಿಸಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ