ಬೆಂಗಳೂರು : ಪಕ್ಷದ ಯಾವುದೇ ವಿಚಾರವಾಗಲಿ ಬಹಿರಂಗ ಚರ್ಚೆ ಮಾಡಬಾರದು ಎಂದು ಪಕ್ಷದ ಶಾಸಕರು ಹಾಗೂ ಸಚಿವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ಡಿಕೆಶಿಯ ಈ ಸೂಚನೆ ಈಗ ಕೈ ಪಾಳಯದ ನಿಜವಾದ ಬಲ ಪ್ರದರ್ಶನದ ಆರಂಭಕ್ಕೆ ವೇದಿಕೆ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಅಧ್ಯಕ್ಷರ ಮಾತಿಗೆ ಎಲ್ಲರೂ ಬೆಲೆ ಕೊಟ್ಟರೆ ಸಹಜವಾಗಿಯೇ ಕಾಂಗ್ರೆಸ್ ಗೊಂದಲ ಬಗೆಹರಿಯಬಹುದು. ಡಿಕೆಶಿ ಮಾತಿಗೆ ಡೋಂಟ್ ಕೇರ್ ಎಂದು ಸಿದ್ದರಾಮಯ್ಯ ಟೀಂ ಮಾತು ಮುಂದುವರಿಸಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.
ಪರಿಸ್ಥಿತಿ ಹದಗೆಟ್ಟರೆ ಸಹಜವಾಗಿಯೇ ಬಲಾಬಲ ಪ್ರದರ್ಶನಕ್ಕೂ ವೇದಿಕೆ ಸೃಷ್ಟಿಯಾಗಲಿದೆ. ಕೆಪಿಸಿಸಿ ಅಧ್ಯಕ್ಷರ ಖಡಕ್ ವಾರ್ನಿಂಗ್ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯವಹುದು ಎನ್ನುವುದೇ ಸದ್ಯದ ಕುತೂಹಲ.