Mysore
27
broken clouds

Social Media

ಭಾನುವಾರ, 29 ಮಾರ್ಚ್ 2026
Light
Dark

ದೇಶದ ಪ್ರಧಾನಿಗೆ ಹೇಗೆ ಗೌರವ ಕೊಡಬೇಕೆಂದನ್ನು ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಡಿ ಕೆ ಶಿವಕುಮಾರ್

ಬೆಂಗಳೂರು : ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಲು ದಕ್ಷಿಣ ಆಫ್ರಿಕಾ, ಗ್ರೀಸ್ ದೇಶಗಳ ಪ್ರವಾಸ ಮುಗಿಸಿ ಇಂದು ಶನಿವಾರ ಬೆಳಗ್ಗೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರು. ಅವರನ್ನು ಸ್ವಾಗತಿಸಲು ಶಿಷ್ಠಾಚಾರ ಪ್ರಕಾರವಾಗಿ ಮುಖ್ಯಮಂತ್ರಿ, ಇಲ್ಲದಿದ್ದರೆ ಉಪ ಮುಖ್ಯಮಂತ್ರಿಗಳು, ರಾಜ್ಯಪಾಲರು ಸಾಮಾನ್ಯವಾಗಿ ಹೋಗುತ್ತಾರೆ.

ಆದರೆ ಇಂದು ಎಚ್ ಎ ಎಲ್ ಏರ್ ಪೋರ್ಟ್ ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮಾತ್ರ ಹೋಗಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದಾರೆ. ಸರ್ಕಾರ ಶಿಷ್ಟಾಚಾರ ಪಾಲನೆ ಉಲ್ಲಂಘಿಸಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಆರೋಪಿಸಿದ್ದರು.

ಅದಕ್ಕೆ ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಆರ್ ಅಶೋಕ್ ಗೆ ಸ್ವಲ್ಪ ಪ್ರಾಬ್ಲಂ ಇದೆ. ಆರ್ ಅಶೋಕ್ ನ ಕೇಂದ್ರ ಸರ್ಕಾರ, ಪ್ರಧಾನಿ ಕಚೇರಿ ಎಷ್ಟು ದೂರ ಇಟ್ಟಿದ್ದಾರೆ ಎನ್ನುವುದಕ್ಕೆ ಇವೆಲ್ಲ ಮಾತುಗಳು ಸಾಕ್ಷಿ. ನಮಗೆ ಸಮಯ ಪ್ರಜ್ಞೆ, ರಾಜಕೀಯ ಪ್ರಜ್ಞೆ, ಪ್ರೊಟೊಕಾಲ್, ಯಾರಿಗೆ ಏನು ಯಾವ ಸಮಯದಲ್ಲಿ ಗೌರವ ನೀಡಬೇಕೆಂದು ಬಿಜೆಪಿಯವರಿಗಿಂತ ಜಾಸ್ತಿ ಚೆನ್ನಾಗಿ ಗೊತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!