Mysore
26
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಐಟಿಆರ್ ಸಲ್ಲಿಸಲು ಕೊನೆ ದಿನಾಂಕದ ವಿಸ್ತರಣೆಯಿಲ್ಲ: ಹಣಕಾಸು ಸಚಿವಾಲು

ಪ್ರತಿ ವರ್ಷದಂತೆ ಈ ವರ್ಷವೂ ಐಟಿಆರ್ ಸಲ್ಲಿಸಲು ಹಣಕಾಸು ಸಚಿವಾಲಯ ಕೊನೆ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ ಈ ವರ್ಷ ಯಾವುದೇ ಕಾರಣಕ್ಕೂ ಐಟಿಆರ್ (ITR) ಸಲ್ಲಿಸಲು ಇರುವ ಕೊನೆ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಆದ್ದರಿಂದ ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಸಲು ಹಣಕಾಸು ಸಚಿವಾಲಯ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ.

ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರು “ಆದಾಯ ತೆರಿಗೆ ಪಾವತಿದಾರರು ತಮ್ಮ ಐಟಿಆರ್ ರಿಟರ್ನ್ ಅನ್ನು ಆದಷ್ಟು ಬೇಗ ಸಲ್ಲಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಏಕೆಂದರೆ ಜುಲೈ 31 ರ ನಂತರ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡುವುದರ ಕುರಿತು ಹಣಕಾಸು ಸಚಿವಾಲಯವು ಆಲೋಚಿಸುತ್ತಿಲ್ಲ.

2022-23ರ ಮೌಲ್ಯಮಾಪನ ವರ್ಷವನ್ನು ನೋಡುವುದಾದರೆ ಕಳೆದ ವರ್ಷ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನವಾದ ಜುಲೈ 31 ರಂದು ಸುಮಾರು 5.83 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ” ಎಂದಿದ್ದಾರೆ.

“ಐಟಿಆರ್ ಫೈಲಿಂಗ್ ಕಳೆದ ವರ್ಷಕ್ಕಿಂತ ಹೆಚ್ಚಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಿರಬೇಕು ಎಂದು ನಾವು ಭಾವಿಸುತ್ತೇವೆ” ಎಂದು ಸಂಜಯ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

“ಐಟಿಆರ್ ಫೈಲಿಂಗ್ ಕಳೆದ ವರ್ಷಕ್ಕಿಂತ ಹೆಚ್ಚು ವೇಗದಲ್ಲಿ ಇರುವುದರಿಂದ ನಾವು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ ಮತ್ತು ಕೊನೆಯ ಕ್ಷಣದವರೆಗೆ ಕಾಯಬೇಡಿ ಮತ್ತು ಯಾವುದೇ ದಿನಾಂಕ ವಿಸ್ತರಣೆಗಳಿಗಾಗಿ ಆಶಿಸಬೇಡಿ ಎಂದು ನಾವು ಅವರಿಗೆ ಸಲಹೆ ನೀಡುತ್ತೇವೆ” ಎಂದಿದ್ದಾರೆ.

ಆದ್ದರಿಂದ, ಜುಲೈ 31 ರ ಗಡುವು ವೇಗವಾಗಿ ಸಮೀಪಿಸುತ್ತಿರುವ ಕಾರಣ ತಮ್ಮ ತೆರಿಗೆ ರಿಟರ್ನ್ ಅನ್ನು ಆದಷ್ಟು ಬೇಗ ಸಲ್ಲಿಸಲು ನಾನು ಅವರಿಗೆ ಸಲಹೆ ನೀಡುತ್ತೇನೆ, ”ಎಂದು ಅವರು ಹೇಳಿದರು.

“ತೆರಿಗೆ ಕ್ರೋಢೀಕರಣ ಗುರಿಗೆ ಸಂಬಂಧಿಸಿದಂತೆ, ಇದು ಹೆಚ್ಚು ಕಡಿಮೆ ಗುರಿ ಬೆಳವಣಿಗೆ ದರಕ್ಕೆ ಅನುಗುಣವಾಗಿದೆ. ಇದು ಶೇಕಡಾ 10.5 ರಷ್ಟು ಆಗಿದೆ” ಎಂದು ಮಲ್ಹೋತ್ರಾ ಹೇಳಿದರು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೆಳವಣಿಗೆ ದರವು ಇಲ್ಲಿಯವರೆಗೆ ಶೇ 12 ರಷ್ಟಿದೆ ಎಂದು ಅವರು ಹೇಳಿದರು.

ಇದರೊಂದಿಗೆ, ದರ ಕಡಿತದ ಕಾರಣದಿಂದಾಗಿ ಅಬಕಾರಿ ಸುಂಕದ ಬೆಳವಣಿಗೆ ದರವು ಶೇಕಡಾ 12 ರಷ್ಟು ಕಡಿಮೆಯಾಗಿದೆ.

“ಇದು ಸದ್ಯದ ಮಟ್ಟಿಗೆ ನೆಗಿಟಿವ್ ದರವಾಗಿದ್ದರೂ, ಮುಂದೆ ಉತ್ತಮವಾಗುವ ಸಂದರ್ಭ ಬರುತ್ತದೆ. ತೆರಿಗೆ ದರಗಳಲ್ಲಿನ ಇಳಿಕೆಯ ಪರಿಣಾಮವು ಮುಗಿದ ನಂತರ, ನಾವು ಅಬಕಾರಿ ಸುಂಕಗಳ ಸಂಗ್ರಹದಲ್ಲಿ ಸ್ವಲ್ಪ ಹೆಚ್ಚಳವನ್ನು ನೋಡಬಹುದಾಗಿದೆ.

ಆದ್ದರಿಂದ, ಒಟ್ಟಾರೆಯಾಗಿ ಇದು ಇನ್ನೂ ಆರಂಭಿಕ ದಿನಗಳು ಮಾತ್ರ. ಇದರಿಂದ ನಾವು ನಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ನಮ್ಮ ಆಶಯ” ಎಂದು ಅವರು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದ ಬಜೆಟ್

ಬಜೆಟ್ 2023-24 ರ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ 33.61 ಲಕ್ಷ ಕೋಟಿ ರೂಪಾಯಿಗಳ ಒಟ್ಟು ತೆರಿಗೆ ಸ್ವೀಕೃತಿಯನ್ನು ಸರ್ಕಾರ ನಿರೀಕ್ಷಿಸುತ್ತದೆ.

ಇದರಲ್ಲಿ 18.23 ಲಕ್ಷ ಕೋಟಿ ರೂ.ಗಳನ್ನು ಒಟ್ಟುಗೂಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಬಜೆಟ್ ಪೇಪರ್‌ಗಳ ಪ್ರಕಾರ ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆಯಿಂದ ಸಂಗ್ರಹಿಸಿದ ಶೇಕಡಾ 10.5 ರಷ್ಟು ಹೆಚ್ಚು ಎಂಬುದು ಗಮನಾರ್ಹ ಸಂಗತಿ.

FY23 ರ ಪರಿಷ್ಕೃತ ಅಂದಾಜಿನಲ್ಲಿ ಕಸ್ಟಮ್ಸ್ ಸುಂಕದಿಂದ ಸಂಗ್ರಹಣೆಗಳು 2.10 ಲಕ್ಷ ಕೋಟಿ ರೂಪಾಯಿಗಳಿಂದ 2.33 ಲಕ್ಷ ಕೋಟಿ ರೂಪಾಯಿಗಳಿಗೆ ಏರುವ ನಿರೀಕ್ಷೆಯಿದೆ.

ಜಿಎಸ್‌ಟಿ ಸಂಗ್ರಹವು ಮುಂದಿನ ಹಣಕಾಸು ವರ್ಷದಲ್ಲಿ ಶೇ.12ರಷ್ಟು ಏರಿಕೆಯಾಗಿ 9.56 ಲಕ್ಷ ಕೋಟಿಗೆ ತಲುಪಲಿದೆ ಎಂದು ಹಣಕಾಸು ಸಚಿವಾಲಯ ಅಂದಾಜು ಮಾಡಿದೆ.

ನೇರ ಮತ್ತು ಪರೋಕ್ಷ ತೆರಿಗೆಗಳನ್ನು ತೆಗೆದುಕೊಂಡರೆ, ಒಟ್ಟು ತೆರಿಗೆ ಸಂಗ್ರಹವು 2023-24 ರಲ್ಲಿ 33.61 ಲಕ್ಷ ಕೋಟಿ ರೂ.ಗೆ 10.45% ರಷ್ಟು ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಕಳೆದ ಹಣಕಾಸು ವರ್ಷದಲ್ಲಿ 30.43 ಲಕ್ಷ ಕೋಟಿ ರೂ. ಆಗಿತ್ತು ಎಂದೂ ಹಣಕಾಸು ಸಚಿವಾಲಯ ವರದಿ ಮಾಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ