Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನಿಥಾರಿ ಹತ್ಯಾಕಾಂಡ: ಪ್ರಮುಖ ಆರೋಪಿ ಸುರಿಂದರ್ ಕೋಲಿ 12 ಕೇಸ್‌ಗಳಲ್ಲಿ ಖುಲಾಸೆ!

ನವದೆಹಲಿ : ಕುಖ್ಯಾತ ನಿಥಾರಿ ಹತ್ಯಾಕಾಂಡ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ದೋಷಿ ಎಂದು ಘೋಷಿತನಾಗಿ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟ ಸುರೀಂದರ್‌ ಕೋಲಿ ಎಂಬಾತನನ್ನು 12 ಪ್ರಕರಣಗಳಲ್ಲಿ ಇಂದು ಅಲಹಾಬಾದ್‌ ಹೈಕೋರ್ಟ್‌ ಖುಲಾಸೆಗೊಳಿಸಿದೆ. ಈ ಪ್ರಕರಣದ ಇನ್ನೋರ್ವ ಆರೋಪಿ ಮೊನಿಂದರ್‌ ಸಿಂಗ್‌ ಪಂಧೇರ್‌ ಎಂಬಾತನನ್ನು ಎರಡು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ.

ಹೈಕೋರ್ಟ್ ಆದೇಶದ ನಂತರ ಕೋಲಿ ಮತ್ತು ಪಂಧೇರ್‌ ಇಬ್ಬರ ಮರಣದಂಡನೆ ಶಿಕ್ಷೆಗಳು ರದ್ದುಗೊಂಡಂತಾಗಿವೆ.

ಸರಣಿ ಹತ್ಯೆಗಳು ಉತ್ತರ ಪ್ರದೇಶದ ನೊಯ್ಡಾದ ನಿಥಾರಿ ಪ್ರದೇಶದ ಮೊನಿಂದರ್‌ ಸಿಂಗ್‌ ಪಂಧೇರ್‌ನ ನಿವಾಸದಲ್ಲಿ 2005 ಮತ್ತು 2006 ನಡುವೆ ನಡೆದಿದ್ದವು. ಪಂಧೇರ್‌ ನಿವಾಸದಲ್ಲಿ ಸುರೀಂದರ್‌ ಕೊಲಿ ಸಹಾಯಕನಾಗಿ ದುಡಿಯುತ್ತಿದ್ದ.

ತನ್ನ ಉದ್ಯೋಗದಾತನ ಮನೆಯಲ್ಲಿ ಹಲವಾರು ಮಕ್ಕಳನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣದಲ್ಲಿ ಸುರೀಂದರ್‌ ದೋಷಿ ಎಂದು ಘೋಷಿತನಾಗಿದ್ದ. ಇಬ್ಬರೂ 20 ವರ್ಷದ ಯುವತಿಯ ಅತ್ಯಾಚಾರ ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿತ್ತು.

ನಾಪತ್ತೆಯಾದ ಮಗುವೊಂದರ ದೇಹದ ಒಂದು ಭಾಗ ಪಂಧೇರ್‌ ನಿವಾಸದ ಪಕ್ಕದ ಚರಂಡಿಯಲ್ಲಿ ನೆರೆಹೊರೆಯವರು ಪತ್ತೆ ಹಚ್ಚಿದಾಗ ಇಡೀ ದೇಶವೇ ಬೆಚ್ಚಿ ಬೀಳುವ ವಿದ್ಯಮಾನ ಬೆಳಕಿಗೆ ಬಂದಿತ್ತು.

ತನಿಖೆ ಮುಂದುವರಿದಾಗ ಇನ್ನಷ್ಟು ಮಕ್ಕಳ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿತ್ತು.

ಸಿಬಿಐ 2017ರಲ್ಲಿ ಇಬ್ಬರ ವಿರುದ್ಧವೂ 19 ಪ್ರಕರಣ ದಾಖಲಿಸಿತ್ತು.

ಸುರೀಂದರ್‌ ಮಕ್ಕಳಿಗೆ ಆಮಿಷವೊಡ್ಡಿ ಮನೆಗೆ ಕರೆತರುತ್ತಿದ್ದರೆ, ನಂತರ ಆತ ಮತ್ತು ಪಂಧೇರ್‌ ಇಬ್ಬರೂ ಸೇರಿ ಅತ್ಯಾಚಾರಗೈದು ಕೊಲೆಗೈಯ್ಯುತ್ತಿದ್ದರೆಂದು ಆರೋಪಿಸಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ