Mysore
20
scattered clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಫಲಿಸಿದ ಪ್ರಾರ್ಥನೆ; 17 ದಿನಗಳ ಕಾಲ ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ ಎಲ್ಲಾ 41 ಕಾರ್ಮಿಕರ ರಕ್ಷಣೆ

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಿಂದಾಗಿ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ಮಿಕರ ರಕ್ಷಣಾ ಕಾರ್ಯ ಯಶಸ್ವಿಯಾಗಿದೆ. ನವೆಂಬರ್‌ 12ರಂದು ಸುರಂಗ ಕುಸಿತ ಸಂಭವಿಸಿತ್ತು. ಬರೋಬ್ಬರಿ 17 ದಿನಗಳ ಸತತ ಕಾರ್ಯಾಚರಣೆಯ ಬಳಿಕ ಕಾರ್ಮಿಕರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿದೆ.

ಕಾರ್ಮಿಕರು ಸಿಲುಕಿದ್ದ ಸ್ಥಳಕ್ಕೆ ಪೈಪ್‌ ಅಳವಡಿಸಿ ಎಲ್ಲಾ 41 ಕಾರ್ಮಿಕರನ್ನು ಹಗ್ಗಕ್ಕೆ ಸ್ಟ್ರೆಚರ್‌ ಕಟ್ಟಿ ಪೈಪ್‌ ಮುಖಾಂತರ ಹೊರತೆಗೆಯುವಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯಶಸ್ವಿಯಾಗಿದೆ. ಈ ಮೂಲಕ ಹಲವು ದಿನಗಳಿಂದ ಕಾರ್ಮಿಕರ ಕುಟುಂಬಸ್ಥರು ಹಾಗೂ ಅನೇಕ ಜನರ ಪ್ರಾರ್ಥನೆ ಫಲಿಸಿದೆ.

ಇನ್ನು ಸುರಂಗದಿಂದ ಹೊರತಂದ ಕಾರ್ಮಿಕರನ್ನು ಆಮ್ಲಜನಕ ಸೌಲಭ್ಯವುಳ್ಳ ಆಂಬುಲೆನ್ಸ್‌ ಮೂಲಕ 30 ಕಿಲೋಮೀಟರ್‌ ದೂರದಲ್ಲಿರುವ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಕೇಂದ್ರಕ್ಕೆ ಸಾಗಿಸಲಾಗಿದ್ದು ಅಲ್ಲಿ ಎಲ್ಲಾ ಕಾರ್ಮಿಕರಿಗೂ ಆಮ್ಲಜನಕ ಬೆಂಬಲಿತ ಬೆಡ್‌ಗಳುಳ್ಳ ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!