ತಿರುವನಂತಪುರ : ಕೊಚ್ಚಿಯ ನೌಕಾ ವಾಯು ನಿಲ್ದಾಣದ ಐಎನ್‌ಎಸ್ ಗರುಡಾ ರನ್‌ವೇಯಲ್ಲಿ ಚೇತಕ್ ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು, ಘಟನೆಯಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.
ನೌಕಾ ವಾಯು ನಿಲ್ದಾಣದಲ್ಲಿ ನಿರ್ವಹಣಾ ಟ್ಯಾಕ್ಸಿ ತಪಾಸಣೆ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ನೌಕಾಪಡೆಯ ವಕ್ತಾರರು ಎಕ್ಸ್‌ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂದು ಕೊಚ್ಚಿಯ ಐಎನ್‌ಎಸ್ ಗರುಡಾದಲ್ಲಿ ನಿರ್ವಹಣಾ ಟ್ಯಾಕ್ಸಿ ತಪಾಸಣೆಯ ವೇಳೆ ಚೇತಕ್ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಇದರ ಪರಿಣಾಮವಾಗಿ ಸಿಬ್ಬಂದಿಯೊಬ್ಬರು ದುರಾದೃಷ್ಟಕರವಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನೌಕಾಪಡೆ ಎಕ್ಸ್‌ನಲ್ಲಿ ತಿಳಿಸಿದೆ.
ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ನೌಕಾಪಡೆಯ ವಕ್ತಾರರು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಎಲ್ಲಾ ನೌಕಾಪಡೆಯ ಸಿಬ್ಬಂದಿ, ಯೋಗೇಂದ್ರ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಅಡ್ಮಿರಲ್ ಹರಿ ಕುಮಾರ್ ಮತ್ತು ಭಾರತೀಯ ನೌಕಾಪಡೆಯ ಎಲ್ಲಾ ಸಿಬ್ಬಂದಿ ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿಗೆ ಸಂತಾಪ ಸೂಚಿಸಿದ್ದಾರೆ. ಕೊಚ್ಚಿಯಲ್ಲಿ ನಡೆದ ದುರದೃಷ್ಟಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸಿಬ್ಬಂದಿ ಯೋಗೇಂದ್ರ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ದುಃಖಿತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.