ಅಯೋಧ್ಯೆಯ ʻಮರ್ಯಾದ ಪುರುಷೋತ್ತಮ್ ಶ್ರೀ ರಾಮ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ʼನ್ನ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಉದ್ಘಾಟಿಸಲಿದ್ದಾರೆ.
ಜನವರಿ 6 ರಂದು ಏರ್‌ಪೋರ್ಟ್ ತನ್ನ ಕಾರ್ಯಾಚರಣೆ ಶುರು ಮಾಡಲಿದೆ. ಡಿಸೆಂಬರ್ 22 ರಂದು ಈ ಏರ್‌ಪೋರ್ಟ್‌ನಲ್ಲಿ ಭಾರತೀಯ ವಾಯು ಪಡೆಯ Airbus A320 ವಿಮಾನವನ್ನ ಯಶಸ್ವಿಯಾಗಿ ಲ್ಯಾಂಡ್ ಮಾಡಲಾಗಿತ್ತು.
ಇನ್ನು ಇಲ್ಲಿ ಏರ್‌ಲೈನ್ಸ್ ಕಂಪನಿ ಇಂಡಿಗೋ ದೇಶದ ಪ್ರಮುಖ ಸಿಟಿಗಳಿಗೆ ಫ್ಲೈಟ್‌ಗಳನ್ನ ಆಫರ್ ಮಾಡಲಿದೆ. ಅಂದ್ರೆ ದೆಹಲಿ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನೈ ಮತ್ತು ಗೋವಾ ಸಿಟಿಗಳಿಗೆ ಈ ಏರ್‌ಲೈನ್ಸ್ ಫ್ಲೈಟ್‌ಗಳನ್ನ ಹಾರಿಸಲಿದೆ.