Mysore
20
overcast clouds
Light
Dark

ಮೈಸೂರು ಮೃಗಾಲಯದಲ್ಲಿ ಸಿಂಹದ ಮರಿಗಳಿಗೆ ನಾಮಕರಣ

ಮೈಸೂರು: ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಇಂದು ಎರಡು ಗಂಡು ಸಿಂಹದ ಮರಿಗಳು ಮತ್ತು ಒಂದು ಹೆಣ್ಣು ಸಿಂಹದ ಮರಿಗೆ ಅನುಕ್ರಮವಾಗಿ ಸೂರ್ಯ, ಚಂದ್ರ ಮತ್ತು ಕಬಿನಿ ಎಂಬ ಹೆಸರನ್ನಿಡಲಾಯಿತು.

ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಈ ಸಂದರ್ಭದಲ್ಲಿ ಹಾಜರಿದು, ಮೃಗಾಲಯದಲ್ಲಿರುವ ರಾಜ ಮತ್ತು ನಿರ್ಭಯ ಸಿಂಹದ ಮರಿಗಳ ಹೆಸರಿನ ಫಲಕ ಅನಾವರಣ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮೃಗಾಲಯವನ್ನು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಇದು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ನಿಲ್ಲುವಂತೆ ಅಭಿವೃದ್ಧಿ ಸಾಸಬೇಕು ಎಂಬುದು ತಮ್ಮ ಇಂಗಿತವಾಗಿದೆ ಎಂದರು.

ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅದರಲ್ಲೂ ಮಕ್ಕಳು ಆಗಮಿಸುತ್ತಿದ್ದು ಅವರಿಗೆ ಪ್ರಾಣಿ-ಸಸ್ಯ ಸಂಕುಲದ ಬಗ್ಗೆ ಹಾಗೂ ವನ್ಯಮೃಗಗಳ ಬಗ್ಗೆ ಮಾಹಿತಿ ತಿಳಿಯಲು ಸಹಕಾರಿಯಾಗಿದೆ ಮನರಂಜನೆಯೂ ಲಭಿಸುತ್ತದೆ ಎಂದು ಹೇಳಿದರು. ಈ ಬಾರಿಯ ಮೈಸೂರು ದಸರಾ ಜಂಬೂಸ ಅವರಿಗೆ ಬರುವ ಆನೆಗಳ ಕುರಿತಂತೆ ಇಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸುವುದಾಗಿಯೂ ಖಂಡ್ರೆ ತಿಳಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ