ಮೈಸೂರು: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ(ಮೈಮುಲ್) ಒಕ್ಕೂಟದ ಅಧ್ಯಕ್ಷ ಪಿ.ಎಂ ಪ್ರಶನ್ನ ಕುಮಾರ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಿರಿಯಾಪಟ್ಟಣ ಮಾಜಿ ಶಾಸಕ ಕೆ.ಮಹದೇವ ಅವರ ಪುತ್ರರಾಗಿರುವ ಪಿ.ಎಂ ಪ್ರಶನ್ನ ಕುಮಾರ್ ಅವರು, ಸಚಿವ ಕೆ.ವೆಂಕಟೇಶ್ ಅವರ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗ್ತಿದೆ.
ಸಚಿವ ಕೆ.ವೆಂಕಟೇಶ್ ಅವರು ಆರು ತಿಂಗಳಲ್ಲಿ 24 ನೋಟಿಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಪ್ರಸನ್ನ ಅವರು ನೇರವಾಗಿ ಆರೋಪಿಸಿದ್ದರು. ಆದರೆ, ಇದೀಗ ಪ್ರಸನ್ನ ಅವರು ದಿಢೀರ್ ಅಂತ ತಮ್ಮ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಈವರೆಗೂ ಪ್ರಶನ್ನ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ.