ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೂ ಮೊದಲು, ಆಲ್ ಇಂಡಿಯಾ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಮತ್ತು ಅಸ್ಸಾಂನ ಸಂಸದ ಬದ್ರುದ್ದೀನ್ ಅಜ್ಮಲ್ ಅವರು, ದೇಶದ ಮುಸ್ಲಿಂ ಸಮುದಾಯವನ್ನು ಜನವರಿ 22 ರಂದು ಮನೆಯಲ್ಲಿಯೇ ಇರುವಂತೆ ಕೇಳಿದ್ದಾರೆ ಮತ್ತು ಆ ದಿನದಂದು ರೈಲಿನಲ್ಲಿ ಪ್ರಯಾಣಿಸದಂತೆ ಮನವಿ ಮಾಡಿದ್ದಾರೆ.
ಅಜ್ಮಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ನಮ್ಮ ‘ಸಮುದಾಯದ ಜನರನ್ನು ಉಳಿಸಿ’ ಎಂದು ಮನವಿ ಮಾಡುತ್ತಿದ್ದಾರೆ ಎಂದಿದೆ. ‘ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಬಹುದು. ಬಾಬರಿ ಮಸೀದಿಯನ್ನು ಕೆಡವಿದಾಗ ಮತ್ತು ಹಿಂಸಾಚಾರ ಭುಗಿಲೆದ್ದಾಗ ಮತ್ತು ಜನರನ್ನು ಥಳಿಸಿದ ಮಾದರಿಯಲ್ಲಿಯೇ ಏನಾದರೂ ಸಂಭವಿಸಬಹುದು’ ಎಂದು ಅವರು ಹೇಳಿದರು.
ಬಾರ್ಪೇಟಾದಲ್ಲಿ ಮದರಸಾದ ಶಂಕುಸ್ಥಾಪನೆ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ‘ಭಾರತದಾದ್ಯಂತ ಸಾವಿರಾರು ಜನರು ಬಸ್ ಮತ್ತು ರೈಲುಗಳಲ್ಲಿ ಅಯೋಧ್ಯೆಗೆ ಪ್ರಯಾಣಿಸುತ್ತಾರೆ. ಈ ವೇಳೆ ಏನು ಬೇಕಾದರೂ ಆಗಬಹುದು. ಆದ್ದರಿಂದ ನಮ್ಮ ದೇಶದಲ್ಲಿರುವ ಮುಸ್ಲಿಮರು ರೈಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು’ ಎಂದಿದ್ದಾರೆ.