Mysore
14
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಹುಬ್ಬಳಿಯಲ್ಲಿ ಕಾಲೇಜು ಯುವತಿ ಹತ್ಯೆ : ಆರೋಪಿಗೆ ನ್ಯಾಯಾಂಗ ಬಂಧನ !

ಹುಬ್ಬಳ್ಳಿ: ಕಾಲೇಜಿನಲ್ಲಿಯೇ ಕಾರ್ಪೊರೇಟರ್ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪಾತಕಿಗೆ ಹುಬ್ಬಳ್ಳಿ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಏಪ್ರಿಲ್ 18ರಂದು ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನಲ್ಲಿ ಓದುತಿದ್ದ ಫಯಾಜ್ ಎಂಬಾತ 12 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ.

ಕೊಲೆ ಬಳಿಕ ಚಾಕುವನ್ನು ಅಲ್ಲೇ ಬಿಸಾಕಿ ಎಸ್ಕೇಪ್ ಆಗಲು ಯತ್ನಿಸಿದ್ದ ಆರೋಪಿಯನ್ನು ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಬಂಧಿಸಿದ್ದರು.

ಬಂಧಿತ ಆರೋಪಿ ಫಯಾಜ್ ನನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ವೇಳೆ ನ್ಯಾಯಾಲಯ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

Tags:
error: Content is protected !!