Mysore
20
overcast clouds
Light
Dark

Ranji Trophy: 42ನೇ ಬಾರಿಗೆ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮುಂಬೈ

ಮುಂಬೈ: ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡವು ವಿದರ್ಭ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ 169 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಬರೋಬ್ಬರಿ ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿ ಗೆದ್ದು ಬೀಗಿತು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಕೊನೆಯ ದಿನದಾಟದಲ್ಲಿ 538 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿದರ್ಭ, 134.3 ಓವರ್‌ಗಳಲ್ಲಿ 368 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ವಿದರ್ಭ ಪರ ಅಮೋಘ ಶತಕ ಗಳಿಸಿದ ಅಕ್ಷಯ್ ವಾಡ್ಕರ್ (102) ಏಕಾಂಗಿ ಹೋರಾಟ ಮಾಡಿದರು. ಇವರಿಗೆ ಹರ್ಷ್‌ ದುಬೆ (65) ಕೊಂಚ ಸಾಥ್‌ ನೀಡಿದರು. ಅವರಿಬ್ಬರು ಆರನೇ ವಿಕೆಟ್‌ಗೆ 130 ರನ್‌ಗಳ ದಿಟ್ಟ ಹೋರಾಟ ನೀಡಿ ತಂಡ ಗೆಲ್ಲುವ ವಿಶ್ವಾಸ ತೋರಿದರು.

ಆದರೆ ಈ ಇಬ್ಬರು ಜೋಡಿಯ ವಿಕೆಟ್ ಪತನದೊಂದಿಗೆ ದಿಢೀರ್ ಕುಸಿತ ಕಂಡ ವಿದರ್ಭ, 14 ರನ್ ಅಂತರದಲ್ಲಿ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಮುಂಬೈ ಪರ ತನುಷ್ ಕೋಟಿಯನ್ ನಾಲ್ಕು, ಮುಷೀರ್ ಖಾನ್ ಹಾಗೂ ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಗಳಿಸಿ ಗೆಲುವಿಗೆ ಶ್ರಮಿಸಿದರು.

ಫೈನಲ್‌ ಪಂದ್ಯದಲ್ಲಿ ಶತಕದಾಟ ಆಡಿದ ಮುಷೀರ್‌ ಖಾನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್ ವಿವರ:

ಮುಂಬೈ ಮೊದಲ ಇನಿಂಗ್ಸ್‌ : 224/10 (64.3 ಓವರ್‌) (ತುಷಾರ್ 75, ಯಶ್ ಠಾಕೂರ್ 54/3)

ವಿದರ್ಭ ಮೊದಲ ಇನಿಂಗ್ಸ್ : 105/10 (64.3 ಓವರ್‌) (ಯಷ್ ರಾಥೋಡ್ 27, ಕೋಟಿಯನ್ 7/3)

ಮುಂಬೈ ಎರಡನೇ ಇನಿಂಗ್ಸ್ : 418/10 (130.2 ಓವರ್‌) (ಮುಷೀರ್ ಖಾನ್ 136, ಶ್ರೇಯಸ್ 95, ರಹಾನೆ 73, ಹರ್ಷ್‌ ದುಬೆ 144/5)

ವಿದರ್ಭ ಎರಡನೇ ಇನಿಂಗ್ : 368/10 (134.3 ಓವರ್‌) (ವಾಡ್ಕರ್‌ 102. ಕೋಟಿಯನ್ 95/4)

ಪಂದ್ಯ ಶ್ರೇಷ್ಠ: ಮುಷೀರ್‌ ಖಾನ್‌
ಸರಣಿ ಶ್ರೇಷ್ಠ: ತನುಷ್ ಕೋಟ್ಯಾನ್

https://x.com/BCCIdomestic/status/1768182725377397038?s=20