Mysore
15
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಹಸು ಗಂಜಲದಿಂದ ಮೌತ್‌ ಫ್ರೆಶ್‌ನರ್‌: ಜೇಡ್ಲ ಆರ್ಗಾನಿಕ್ಸ್‌ ಸಂಸ್ಥೆಯಿಂದ ಹೊಸಾ ಆವಿಷ್ಕಾರ!

ಬೆಂಗಳೂರು : ಹಸುವಿನ ಸಗಣಿ ಮತ್ತು ಗಂಜಲಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುತ್ತಿರುವ ಜೇಡ್ಲ ಆರ್ಗಾನಿಕ್ಸ್‌  ಎಂಬ ಸಂಸ್ಥೆ ಈಗ ಹೊಸದೊಂದು ಅವಿಷ್ಕಾರದ ಮೂಲಕ ಜನರನ್ನು ಅಚ್ಚರಿಗೆ ನೂಕಿದೆ . ಗೋಮೂತ್ರದಿಂದ ಮೌತ್‌ ಫ್ರೆಶನರ್‌ ಮಾತ್ರವಲ್ಲದೇ ಸುಗಂಧ ದೃವ್ಯ  ತಯಾರಿಕೆಯಲ್ಲಿಯೂ ತೊಡಗಿಕೊಂಡಿದೆ.

ಶ್ರೀರಾಮಚಂದ್ರಾಪುರ ಮಠದ ಗುರುಗಳಾದ ರಾಘವೇಶ್ವರ ಭಾರತಿ ಅವರ ಸಲಹೆ ಪಡೆದು ಈ ಉತ್ಪನ್ನಗಳನ್ನು ತಯಾರಿಸಿರುವುದಾಗಿ ಸಂಸ್ಥೆಯು ಹೇಳಿಕೊಂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೇಡ್ಲ ಆರ್ಗಾನಿಕ್ಸ್‌ ಸಂಸ್ಥೆಯ ಮುಖ್ಯಸ್ಥರಾದ ರಾಜಾರಾಮ್‌ ಅವರು, ಗೋಮೂತ್ರ ಬಳಕೆಗೆ ತುಂಬಾ ಕಷ್ಟ. ಅದನ್ನು ಹೇಗೆ ಕುಡಿಯುವುದು , ಹೇಗೆ ಬಳಸುವುದು ಎಂದು ಜನರಲ್ಲಿ ತಾತ್ಸಾರವಿರುತ್ತದೆ. ಅಂಥವರಿಗಾಗಿ ನಾವು ಗೋಮೂತ್ರದ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕ್ಯಾನ್ಸರ್‌ ಮಹಾಮಾರಿಗೆ ಗೋಮೂತ್ರ ಬಳಕೆಯ ಬಗ್ಗೆ ಆಯುರ್ವೇದದಲ್ಲಿಯೂ ಉಲ್ಲೇಖವಿದೆ. ನಮ್ಮ ಸಂಸ್ಥೆಯು ಗೋಮೂತ್ರ ಬಳಸಿ ಮೌತ್‌ ಗಾರ್ಗಲ್‌ (ಬಾಯಿ ಮುಕ್ಕಳಿಸುವ ದ್ರಾವಣ) ತಯಾರಿಸಿದೆ ಎಂದ ರಾಜಾರಾಮ್ ಹೇಳಿದ್ದಾರೆ.

ಇದರಿಂದ ಹಲ್ಲು, ಒಸಡುಗಳ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೇ, ಹಸುವಿನ ಮೂತ್ರ ಬಳಸಿ ಬಾಯಿ ವಾಸನೆಯನ್ನೂ ನಿವಾರಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!