Mysore
16
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅಮರನಾಥ್‌ ಯಾತ್ರೆಯಲ್ಲಿ 40 ಕ್ಕೂ ಹೆಚ್ಚು ಆಹಾರ ಪದಾರ್ಥಗಳಿಗೆ ನಿಷೇಧ

ನವದೆಹಲಿ: ಮುಂಬರುವ ಅಮರನಾಥ ಯಾತ್ರೆಯಲ್ಲಿ 40 ಕ್ಕೂ ಹೆಚ್ಚು ಆಹಾರ ಪದಾರ್ಥಗಳನ್ನು ನಿಷೇಧಿಸಲಾಗಿದ್ದು, ಯಾತ್ರಾರ್ಥಿಗಳು ದಿನಕ್ಕೆ ಕನಿಷ್ಠ 5 ಕಿಲೋಮೀಟರ್ ನಡೆದುಕೊಂಡು ದೈಹಿಕ ಕ್ಷಮತೆ ಸಾಧಿಸುವಂತೆ ಸೂಚಿಸಲಾಗಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ ಗುರುವಾರ ಹೊರಡಿಸಿರುವ ಆರೋಗ್ಯ ಸಲಹೆಯಲ್ಲಿ ತಿಳಿಸಿದೆ. ನಿಷೇಧಿತ ಆಹಾರ ಪದಾರ್ಥಗಳಲ್ಲಿ ಪಾನೀಯಗಳು, ಕರಿದ ಮತ್ತು ತ್ವರಿತ ಆಹಾರ ಪದಾರ್ಥಗಳು ಸೇರಿವೆ.

ದಕ್ಷಿಣ ಕಾಶ್ಮೀರದಲ್ಲಿರುವ ಹಿಮಾಲಯನ್ ದೇಗುಲಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರು ದೈಹಿಕ ಕ್ಷಮತೆಯನ್ನು ಸಾಧಿಸಲು ಆರೋಗ್ಯ ಸಲಹೆ ನೀಡಿದ್ದು ದಿನಕ್ಕೆ ಸುಮಾರು 4 ರಿಂದ 5 ಕಿಮೀ ಪೂರ್ವಭಾವಿಯಾಗಿ ಬೆಳಗ್ಗೆ ಮತ್ತು ಸಂಜೆಯ ನಡಿಗೆಯನ್ನು ಪ್ರಾರಂಭಿಸುವಂತೆ ಕೇಳಿಕೊಂಡಿದೆ.

ದಕ್ಷಿಣ ಕಾಶ್ಮೀರ ಹಿಮಾಲಯದ 3,880-ಮೀಟರ್ ಎತ್ತರದ ಪವಿತ್ರ ಗುಹೆಗೆ ಯಾತ್ರೆ ಜುಲೈ 1 ರಂದು ಎರಡು ಮಾರ್ಗಗಳ ಮೂಲಕ ಪ್ರಾರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48-ಕಿಮೀ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್ಬಾಲ್ ನ ಬಾಲ್ ತಾಲ್ 14 ಕಿಮೀ ಕಡಿದಾದ ಇನ್ನೊಂದು ಮಾರ್ಗವಾಗಿದೆ.

ನೀವು 14 ಕಿಲೋಮೀಟರ್ ಪಾದಯಾತ್ರೆಯ ಅಮರನಾಥ ಯಾತ್ರೆಯನ್ನು ಪ್ರಾರಂಭಿಸುವ ಮೊದಲು, ನಿಷೇಧಿತ ಆಹಾರ ಪದಾರ್ಥಗಳ ಪಟ್ಟಿ ಮತ್ತು ತೀರ್ಥಯಾತ್ರೆಯಲ್ಲಿ ನಿಮಗೆ ಸಾಗಿಸಲು ಅನುಮತಿಸಲಾದ ವಸ್ತುಗಳನ್ನು ಪರಿಶೀಲಿಸಿ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಸಲಹೆಯ ಪ್ರಕಾರ, ನಿಷೇಧಿತ ಆಹಾರಗಳಲ್ಲಿ ಭಾರೀ ಪುಲಾವ್, ಫ್ರೈಡ್ ರೈಸ್, ಪೂರಿ, ಬಾಟುರಾ, ಪಿಜ್ಜಾ, ಬರ್ಗರ್, ಸ್ಟಫ್ಡ್ ಪರೋಟಾ, ದೋಸೆ ಮತ್ತು ಕರಿದ ರೊಟ್ಟಿ, ಬೆಣ್ಣೆಯೊಂದಿಗೆ ಬ್ರೆಡ್, ಕ್ರೀಮ್ ಆಧಾರಿತ ಆಹಾರಗಳು, ಉಪ್ಪಿನಕಾಯಿ, ಚಟ್ನಿ, ಕರಿದ ಪಾಪಡ್, ಚೌಮೇನ್ ಇತರ ಕರಿದ ಮತ್ತು ತ್ವರಿತ ಆಹಾರ ಪದಾರ್ಥಗಳನ್ನು ತರಬಾರದು ಎಂದು ಸೂಚಿಸಿದೆ.

ಭಕ್ತರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯು ಧಾನ್ಯಗಳು, ಬೇಳೆಕಾಳುಗಳು, ಹಸಿರು ತರಕಾರಿಗಳು ಮತ್ತು ಸಲಾಡ್‌ಗಳಂತಹ ಆರೋಗ್ಯಕರ ಆಯ್ಕೆಗಳನ್ನು ಕೆಲವು ಅಕ್ಕಿ ಭಕ್ಷ್ಯಗಳೊಂದಿಗೆ ಶಿಫಾರಸು ಮಾಡಿದೆ. 40 ನಿಷೇಧಿತ ವಸ್ತುಗಳನ್ನು ಹೊರತುಪಡಿಸಿ ಎಲ್ಲವನ್ನೂ ಅನುಮತಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!