Mysore
16
clear sky

Social Media

ಬುಧವಾರ, 10 ಡಿಸೆಂಬರ್ 2025
Light
Dark

ಜಗತ್ತು ಹೇಗೆ ನಡೆಯುತ್ತದೆ ಎಂಬುದನ್ನು ಮೋದಿ ದೇವರಿಗೆ ವಿವರಿಸಲು ಆರಂಭಿಸುತ್ತಾರೆ : ರಾಗಾ ಲೇವಡಿ

ಸ್ಯಾನ್ ಫ್ರಾನ್ಸಿಸ್ಕೋ : ದೇವರ ಪಕ್ಕದಲ್ಲಿ ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂರಿಸಿದರೆ,ಜಗತ್ತು ಹೇಗೆ ನಡೆಯುತ್ತದೆ ಎಂದು ಅವರು ದೇವರಿಗೆ ವಿವರಿಸಲು ಆರಂಭಿಸುತ್ತಾರೆ. ನಾನು ಸೃಷ್ಟಿಸಿದ್ದು ಏನು ಎಂಬ ಬಗ್ಗೆ ಸ್ವತಃ ದೇವರಿಗೇ ಗೊಂದಲ ಶುರುವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಣಕಿಸಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಮತ್ತು ನಾಗರಿಕ ಸಮುದಾಯದ ಜತೆ ಸಂವಾದ ನಡೆಸಿದ ಅವರು, ಅವರು ದೇವರ ಜತೆ ಕುಳಿತುಕೊಂಡು, ಎಲ್ಲವನ್ನೂ ವಿವರಿಸಬಲ್ಲರು. ಪ್ರಧಾನಿ ನರೇಂದ್ರ ಮೋದಿ ಅಂತಹ ಒಬ್ಬ ವ್ಯಕ್ತಿ ಎಂದು ಲೇವಡಿ ಮಾಡಿದ್ದಾರೆ.

ತಮಗೆ ಎಲ್ಲವೂ ತಿಳಿದಿದೆ ಎಂದು ‘ಸಂಪೂರ್ಣ ನಂಬಿಕೊಂಡಿರುವ ವ್ಯಕ್ತಿಗಳ ಗುಂಪು ಭಾರತವನ್ನು ನಡೆಸುತ್ತಿದೆ. ದೇಶದಲ್ಲಿ ಪ್ರಜಾಸತ್ತತೆ ನಾಶವಾಗಿದೆ. ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ಜನರನ್ನು ಬೆದರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜಪಿ ಜನರಿಗೆ ಬೆದರಿಕೆ ಹಾಕುತ್ತಿದೆ ಮತ್ತು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.ದೇಶದಾದ್ಯಂತ ಕೇಂದ್ರ ತನಿಖಾ ಸಂಸ್ಥೆಗಳು ವಿರೋಧ ಪಕ್ಷದ ನಾಯಕರನ್ನು ಪ್ರಶ್ನಿಸುವುದು, ಅವರ ನಿವಾಸ, ಕಾರ್ಯಾಲಯಗಳ ಮೇಲೆ ದಾಳಿ ನಡೆಸಿರುವುದನ್ನು ರಾಹುಲ್ ಉಲ್ಲೇಖಿದ ಅವರು, ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಸರ್ಕಾರ ತನ್ನ ಎಲ್ಲಾ ಶಕ್ತಿಯನ್ನು ಬಳಸಿದೆ ಎಂಬ ಗಂಭೀರ ಆರೋಪವನ್ನು ಮಾಡಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ತಾವು ನಡೆಸಿದ ಭಾರತ್ ಜೋಡೋ ಯಾತ್ರೆಯ ಬಗ್ಗೆಯೂ ಅವರು ಇದೇ ವೇಳೆ ಹೇಳಿಕೊಂಡ ಅವರು, ಕನ್ಯಾ ಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದು ಅಷ್ಟು ಸುಲಭವಾಗಿರಲಿಲ್ಲ. ದಿನವೂ ನಡೆಯುವುದು ಸವಾಲಾಗಿತ್ತು. ಆದರೆ, ನನ್ನ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಉತ್ಸಾಹದಿಂದ ನೂರಕ್ಕೂ ಹೆಚ್ಚು ದಿನ ಪಾದಯಾತ್ರೆಯಿಂದ ಹಲವು ರಾಜ್ಯಗಳನ್ನು ಕ್ರಮಿಸಿ ಕಾಶ್ಮೀರದಲ್ಲಿ ಅಂತ್ಯಗೊಳಿಸಿದೆವು ಎಂದು ಹೇಳಿದರು.

ಇದು ನೀವು ( ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ) ಪ್ರತಿನಿಧಿಸುವ ಭಾರತ, ನೀವು ಈ ಮೌಲ್ಯಗಳನ್ನು ಒಪ್ಪದಿದ್ದರೆ ನೀವು ಇಲ್ಲಿ ಇರುತ್ತಿರಲಿಲ್ಲ, ನೀವು ಕೋಪ, ದ್ವೇಷ ಮತ್ತು ದುರಹಂಕಾರವನ್ನು ನಂಬಿದ್ದರೆ, ನೀವು ಬಿಜೆಪಿ ಸಭೆಯಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ನಾನು ಮನ್ ಕಿ ಬಾತ್ ಮಾಡುತ್ತಿದ್ದೆ. ಆದ್ದರಿಂದ ಅಮೆರಿಕದಲ್ಲಿ ಭಾರತದ ಧ್ವಜವನ್ನು ಹಿಡಿದಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಹೇಳಿದರು.

ಬಿಜೆಪಿ ವಿರುದ್ಧ ರಾಹುಲ್ ಟೀಕೆ ನಡೆಸುತ್ತಿರುವ ವೇಳೆ ಸಭಿಕರು ಗಲಾಟೆ ಆರಂಭಿಸಿದರು. ಆರ್‍ಎಸ್‍ಎಸ್ ಮತ್ತು ಬಿಜೆಪಿ ವಿರುದ್ಧ ರಾಹುಲ್ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘಟಕರು ಪ್ರತಿಭಟನಾಕಾರರನ್ನು ಸಭೆಯಿಂದ ಹೊರ ಕಳುಹಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!