ಇಂದು ( ನವೆಂಬರ್ 30 ) ಮಿಜೊರಾಂ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್‌ಗಳು ಪ್ರಕಟಗೊಂಡಿವೆ. ನವೆಂಬರ್ 7 ರಂದು ನಡೆದಿದ್ದ ಚುನಾವಣೆಯಲ್ಲಿ 40 ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ 80.66% ಮತದಾನವಾಗಿತ್ತು. ಈ ಮತದಾನದಲ್ಲಿ 174 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದು, ಡಿಸೆಂಬರ್ 3ರಂದು ಫಲಿತಾಂಶ ಹೊರಬೀಳಲಿದೆ.
ಇನ್ನು ಕಳೆದ ಬಾರಿ 26 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷ ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಬಿಜೆಪಿ, ಜೋರಂ ಪೀಪಲ್ಸ್ ಮೂವ್‌ಮೆಂಟ್ ಹಾಗೂ ಕಾಂಗ್ರೆಸ್ ಪಕ್ಷಗಳೂ ಸಹ ರೇಸ್‌ನಲ್ಲಿವೆ. ಇನ್ನು ಇಂದ ಪ್ರಕಟವಾಗಿರುವ ಎಕ್ಸಿಟ್ ಪೋಲ್‌ಗಳು ಯಾವ ರೀತಿಯ ಫಲಿತಾಂಶ ಬರಲಿವೆ ಎಂದು ಹೇಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಜನ್ ಕಿ ಬಾತ್ ಎಕ್ಸಿಟ್ ಪೋಲ್
* ಮಿಜೋ ನ್ಯಾಷನಲ್ ಪಾರ್ಟಿ : 10 – 14
* ಕಾಂಗ್ರೆಸ್ : 5 – 9
* ಜೋರಂ ಪೀಪಲ್ಸ್ ಮೂವ್‌ಮೆಂಟ್ : 15 – 25
* ಇತರೆ : 0 – 2
ಇಂಡಿಯಾ ಟಿವಿ – ಸಿಎನ್‌ಎಕ್ಸ್ ಎಕ್ಸಿಟ್ ಪೋಲ್
* ಮಿಜೋ ನ್ಯಾಷನಲ್ ಪಾರ್ಟಿ : 14 – 18
* ಕಾಂಗ್ರೆಸ್ : 8 – 10
* ಜೋರಂ ಪೀಪಲ್ಸ್ ಮೂವ್‌ಮೆಂಟ್ : 12 – 16
* ಇತರೆ : 0 – 2
ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್
* ಮಿಜೋ ನ್ಯಾಷನಲ್ ಪಾರ್ಟಿ : 16 – 20
* ಕಾಂಗ್ರೆಸ್ : 6 – 10
* ಜೋರಂ ಪೀಪಲ್ಸ್ ಮೂವ್‌ಮೆಂಟ್ : 10 – 14
* ಇತರೆ : 2 – 3
ರಿಪಬ್ಲಿಕ್ ಮ್ಯಾಟ್ರಿಜ್
* ಮಿಜೋ ನ್ಯಾಷನಲ್ ಪಾರ್ಟಿ : 17 – 22
* ಕಾಂಗ್ರೆಸ್ : 7 – 10
* ಜೋರಂ ಪೀಪಲ್ಸ್ ಮೂವ್‌ಮೆಂಟ್ : 7 – 12
* ಇತರೆ : 1 – 2
ಟೈಮ್ಸ್ ನೌ ಇಟಿಜಿ
* ಮಿಜೋ ನ್ಯಾಷನಲ್ ಪಾರ್ಟಿ : 14 – 18
* ಕಾಂಗ್ರೆಸ್ : 9 – 13
* ಜೋರಂ ಪೀಪಲ್ಸ್ ಮೂವ್‌ಮೆಂಟ್ : 10 – 14
* ಇತರೆ : 0 – 2
ಎಬಿಪಿ ಸಿ ವೋಟರ್ ಸಮೀಕ್ಷೆ
* ಮಿಜೋ ನ್ಯಾಷನಲ್ ಪಾರ್ಟಿ : 15 – 21
* ಕಾಂಗ್ರೆಸ್ : 2 – 8
* ಜೋರಂ ಪೀಪಲ್ಸ್ ಮೂವ್‌ಮೆಂಟ್ : 12 – 18
* ಇತರೆ : 0