ನವದೆಹಲಿ: ವಿರೋಧಪಕ್ಷಗಳ ಇಂಡಿಯಾ(ಐಎನ್‌ಡಿಐಎ) ಮೈತರಿಕೂಟದ ಮುಖ್ಯಸ್ಥರನ್ನಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ. ಈ ಕುರಿತು ಅಧಿಕೃತ ಹೇಳಿಕೆ ಮಾತ್ರ ಬರಬೇಕಿದೆ.
ಮುಖ್ಯಸ್ಥ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಹಾ ಆಕಾಂಕ್ಷಿಯಾಗಿದ್ದರು ಸಹಾ, ಇಂದಿನ ಸಭೆಯಲ್ಲಿ ಕಾಂಗ್ರೆಸ್‌ನಿಂದ ಯಾರಾದರೂ ಅಧಿಕಾರ ವಹಿಸಬೇಕು ಎಂದು ಅವರು ಹೇಳಿದರು. ಅದ್ಯಾಗೋ ಸವಾಲಾಗಿದ್ದ ಮುಖ್ಯಸ್ಥರ ಆಯ್ಕೆ ಮುಗಿದಿದ್ದು, ಸೀಟು ಹಂಚಿಕೆ ವಿಚಾರವನ್ನು ಇಂಡಿಯಾ ಮೈತ್ರಿಕೂಟ ಹೇಗೆ ನಿಭಾಹಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.