ಕೌಲಲಾಂಪುರ: ಇಲ್ಲಿನ ವಾಯು ನೆಲೆಯ ಸೇನಾ ಹೆಲಿಕಾಪ್ಟರ್‌ಗಳು ಅಭ್ಯಾಸ ನಡೆಸುವ ವೇಳೆ ಮುಖಾಮುಖಿ ಡಿಕ್ಕಿಯಾಗಿ ಪತನವೊಂದಿದ್ದು, ಅಭ್ಯಾಸದಲ್ಲಿ ಭಾಗಿಯಾಗಿದ್ದ ಎಲ್ಲಾ 10 ಮಂದಿ ಸೇನಾ ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಲೇಷ್ಯಾ ನೌಕಾಪಡೆ ಮಂಗಳವಾರ (ಏ.೨೩) ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ತಿಂಗಳು ಮಲೇಷ್ಯಾದಲ್ಲಿ ನಡೆಯುವ 90ನೇ ವಾಯು ಸೇನಾ ವಾರ್ಷಿಕೋತ್ಸವ ಅಂಗವಾಗಿ ನಾರ್ತ್ ಪೆರಾಕ್ ಸ್ಟೇಟ್‌ನ ನೌಕ ನೆಲೆಯಲ್ಲಿ ತಾಲೀಮು ನಡೆಸುತ್ತಿದ್ದ ವೇಳೆ ಸೇನಾ ಹೆಲಿಕಾಪ್ಟರ್‌ಗಳೆರೆಡು ಮುಖಾಮುಖಿ ಘರ್ಷಣೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ತಾಲೀಮು ನಡೆಸುತ್ತಾ ಎಲ್ಲಾ ಹತ್ತು ಮಂದಿ ಮರಣ ಹೊಂದಿದ ಘಟನೆ ಸಂಭವಿಸಿದೆ.