ಇಂದು ( ಡಿಸೆಂಬರ್ 3 ) ರಾಜಸ್ಥಾನ್, ತೆಲಂಗಾಣ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ್ ಕ್ಷೇತ್ರಗಳ ವಿಧಾನಸಭೆಯ ಫಲಿತಾಂಶ ಹೊರಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತೆಎಣಿಕೆ ಆರಂಭಗೊಂಡಿದ್ದು, ಮಧ್ಯ ಪ್ರದೇಶದಲ್ಲಿ ಬಿಜೆಪಿ 10 ಗಂಟೆ ವೇಳೆಗೆ ಮ್ಯಾಜಿಕ್ ನಂಬರ್‌ಗಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಹೌದು, ಮಧ್ಯಪ್ರದೇಶದ ಎಲ್ಲಾ 230 ಕ್ಷೇತ್ರಗಳ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, 146 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದ್ದು, ಕಾಂಗ್ರೆಸ್ 83 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರರು ಕೇವಲ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು. ಮಧ್ಯ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 116 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಹೀಗಾಗಿ ಮಧ್ಯ ಪ್ರದೇಶದಲ್ಲಿ ಬಿಜೆಪಿ ಬಿಜೆಪಿ ಆರಂಭದಿಂದಲೂ ಹಿಡಿತ ಸಾಧಿಸಿ ಗೆಲುವು ಸಾಧಿಸುವತ್ತ ಹೆಜ್ಜೆ ಇಡುತ್ತಿದೆ.





