ನವದೆಹಲಿ: ಚುನಾವಣಾ ಆಯಕ್ತ ರಾಜೀವ್ ಕುಮಾರ್ ಅವರು ಇಂದು (ಮಾ.೧೬) ಲೋಕಸಭಾ ಚುನಾವಣೆ ದಿನಾಂಕವನ್ನು ಪ್ರಕಟ ಮಾಡಿದ್ದಾರೆ.
ಇದೇ ಏಪ್ರಿಲ್ 19ರಿಂದ ಜೂನ್ 1 ವರೆಗೆ ಒಟ್ಟು 7 ಹಂತದಲ್ಲಿ ದೇಶಾದ್ಯಂತ ಚುನಾವಣೆ ನಡೆಯಲಿದೆ. ಕ್ರಮವಾಗಿ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ಒಟ್ಟು 10.5 ಲಕ್ಷ ಮತಗಟ್ಟೆಗಳಲ್ಲಿ 55 ಲಕ್ಷ ಮತ ಯಂತ್ರಗಳನ್ನು ಬಳಕೆ ಮಾಡಿಕೊಂಡು ಸುಮಾರು 1.50 ಕೋಟಿ ಚುನಾವಣಾ ಸಿಬ್ಬಂದಿಗಳ ನೇತೃತ್ವದಲ್ಲಿ ಈ ಬಾರಿಯ ಲೋಕಸಭಾ ಚನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.
ಈ ಬಾರಿ ಒಟ್ಟು 96.8 ಕೋಟಿ ಜನರು ಮತದಾನ ಮಾಡಲಿದ್ದಾರೆ. ಅದರಲ್ಲಿ 2.18 ಲಕ್ಷ ಶತಾಯುಷಿಗಳು ಇದ್ದಾರೆ, 85 ವರ್ಷ ಮೇಲ್ಪಟ್ಟವರು 82 ಲಕ್ಷ ಮಂದಿ ಮತ್ತು ತೃತೀಯ ಲಿಂಗಿಗಳು 48 ಸಾವಿರ ಜನರು ಇದ್ದಾರೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣಾ ಮಾಹಿತಿ:
ಪುರುಷ ಮತದಾರರು: 49.70 ಕೋಟಿ
ಮಹಿಳಾ ಮತದಾರರು: 47.10 ಕೋಟಿ
ಶತಾಯುಷಿಗಳು: 2.18 ಲಕ್ಷ
ವಿಶೇಷ ಚೇತನರು: 88 ಲಕ್ಷ
ತೃತೀಯ ಲಿಂಗಿಗಳು: 48 ಸಾವಿರ
ಬಳಸಲಾದ ವಾಹನಗಳು: 4 ಲಕ್ಷ
ಚುನಾವಣಾ ಸಿಬ್ಬಂದಿಗಳು: 1.50 ಕೋಟಿ
ಮೊದಲ ಬಾರಿ ಮತದಾರರು: 1.80 ಕೋಟಿ
20-29 ವರ್ಷ ವಯಸ್ಕ ಮತದಾರರು: 19.74 ಕೋಟಿ





