Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೈಸೂರು: ಸರ್ಕಾರಿ ಕಾಲೇಜು ಪ್ರಾಧ್ಯಾಪಕನ ಮೇಲೆ ಲೋಕಾಯುಕ್ತ ದಾಳಿ

ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡಿನ ಸರ್ಕಾರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಮಹದೇವಸ್ವಾಮಿ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರು ನಗರದ ಜೆಪಿ ನಗರದ ಮಹದೇವಪುರದಲ್ಲಿರುವ ನಿವಾಸ ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಹದೇವಪುರದ ನಿವಾಸದ ಜತೆ ನಂಜನಗೂಡು, ವಿಜಯನಗರ, ಜೆಪಿನಗರ, ಕೃಷ್ಣರಾಜನಗರದಲ್ಲಿರುವ ಒಟ್ಟು 5 ಸ್ಟೀಲ್‌ ಅಂಗಡಿ, ಮಹದೇವಸ್ವಾಮಿ ಶಿಕ್ಷಣ ಸಂಸ್ಥೆ, ಜೆಪಿ ನಗರದಲ್ಲಿರುವ ಬಟ್ಟೆ ಅಂಗಡಿ ಮೇಲೆ ದಾಳಿ ನಡೆದಿದೆ. ಕುಟುಂಬದ ಹೆಸರಿನಲ್ಲಿ ಎಂ.ಎಸ್‌ ಗ್ರೂಪ್‌ ಕಂಪೆನಿ ಇದ್ದು, ಇದರಲ್ಲಿ ಇವರ ಹೂಡಿಕೆ ಇದೆ ಎಂಬ ಆರೋಪವಿದ್ದ ಕಾರಣ ಪಿ ಸುರೇಶ್‌ ಬಾಬು ಮಾರ್ಗದರ್ಶನದಲ್ಲಿ, ಡಿಎಸ್‌ಪಿ ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳಿಂದ ವಿವಿಧೆಡೆ ಪರಿಶೀಲನೆ ನಡೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ